ADVERTISEMENT

ಸಿನಿಮಾ ಥಿಯೇಟರ್‌ಗೆ ಮರಳುವರೇ ಜನ?

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 11:55 IST
Last Updated 23 ಜೂನ್ 2020, 11:55 IST
ಪೊನ್ಮಮಗಳ್‌ ವಂದಾಳ್ ಚಿತ್ರದಲ್ಲಿ ಜ್ಯೋತಿಕಾ
ಪೊನ್ಮಮಗಳ್‌ ವಂದಾಳ್ ಚಿತ್ರದಲ್ಲಿ ಜ್ಯೋತಿಕಾ   

ಒಟಿಟಿ ವೇದಿಕೆಯಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಮರಳಿ ಥಿಯೇಟರ್‌ಗಳಲ್ಲಿ ಸಿನಿಮಾ ನೋಡುತ್ತಾರಾ? ಎನ್ನುವ ಪ್ರಶ್ನೆಯೊಂದು ಮೂಡುತ್ತಿದೆ. ಕಳೆದ ಕೆಲ ತಿಂಗಳಿನಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಒಟಿಟಿ ಶಬ್ದ ಹೆಚ್ಚು ಕೇಳಿ ಬರುತ್ತಿದೆ.

ಲಾಕ್‌ಡೌನ್‌ ಕಾರಣದಿಂದ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿವೆ. ಆ ಕಾರಣಕ್ಕೆ ಒಟಿಟಿ ವೇದಿಕೆಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮನಸ್ಸು ಮಾಡುತ್ತಿದ್ದಾರೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ನಿರ್ಮಾಪಕರು ಒಟಿಟಿಯಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಪಣ ತೊಟ್ಟು ಬಿಡುಗಡೆ ಮಾಡಿದ್ದಾರೆ.

ಬಾಲಿವುಡ್‌ನ ‘ಗುಲಾಬೊ ಸಿತಾಬೊ’, ಕೀರ್ತಿ ಸುರೇಶ್ ಅಭಿನಯದ ‘ಪೆಂಗ್ವಿನ್’‌ ಹಾಗೂ ಜ್ಯೋತಿಕಾ ನಟನೆಯ ತಮಿಳಿನ ‘ಪೊನ್ಮಮಗಳ್‌ ವಂದಾಳ್’ ಸಿನಿಮಾಗಳು ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದವು. ನೇರವಾಗಿ ಒಟಿಟಿ ವೇದಿಕೆಯಲ್ಲೇ ಬಿಡುಗಡೆಯಾಗುವ ಕಾರಣಕ್ಕೆ ಈ ಸಿನಿಮಾಗಳು ಬಿಡುಗಡೆಗೆ ಮುಂಚೆ ಸಾಕಷ್ಟು ಸದ್ದು ಮಾಡಿದ್ದವು. ಸಿನಿಮಾ ವಿತಕರು ಮೊದಲಿನಿಂದಲೂ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದನ್ನು ವಿರೋಧಿಸಿದ್ದರು. ಆದರೆ ನಿರ್ಮಾಪಕರು ಒಟಿಟಿಯಲ್ಲಿ ಬಿಡುಗಡೆ ಮಾಡುವುದೇ ಉತ್ತಮ ಎಂಬ ನಿರ್ಣಯಕ್ಕೆ ಬಂದಿದ್ದರು. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಥಿಯೇಟರ್ ತೆರೆದ ಮೇಲೆ ಜನರು ಥಿಯೇಟರ್‌ನಲ್ಲೇ ಸಿನಿಮಾ ನೋಡುತ್ತಾರಾ? ಕಾದು ನೋಡಬೇಕು. ಕಳೆದ ಮೂರು ತಿಂಗಳಿಂದ ದೇಶದಾದ್ಯಂತ ಎಲ್ಲಾ ಸಿನಿಮಾ ಥಿಯೇಟರ್‌ಗಳು ಬಂದ್ ಆಗಿದ್ದವು. ಸಿನಿಮಾ ಹಾಲ್‌ಗಳನ್ನು ತೆರೆಯಲು ಆಗಸ್ಟ್ ನಂತರವೇ ಸರ್ಕಾರ ಅನುಮತಿ ನೀಡಲಿದೆ ಎನ್ನುತ್ತಿವೆ ಮೂಲಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.