
ಕನ್ನಡ ಚಿತ್ರರಂಗದ ನಿರ್ಮಾಪಕಿ, ದಿವಗಂತ ಪಾರ್ವತಮ್ಮ ರಾಜ್‌ಕುಮಾರ್ ಅವರ 86ನೇ ವರ್ಷದ ಹುಟ್ಟುಹಬ್ಬಕ್ಕೆ ನಟ ವಿನಯ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಶುಭ ಕೋರಿದ್ದಾರೆ.
ಪಾರ್ವತಮ್ಮ ಅವರಿಗೆ ಶುಭಕೋರಿದ ವಿನಯ್ ಅವರು, ‘ನಮ್ಮ ಕುಟುಂಬದ ಶಕ್ತಿ‘ ಎಂದು ಬರೆದುಕೊಂದ್ದರೆ, ರಾಘವೇಂದ್ರ ರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ, ‘ಮೌರ್ಯ‘ ಚಿತ್ರದ ‘ಅಮ್ಮ ಐ ಲವ್ ಯು’ ಹಾಡಿನ ಜತೆಗೆ ಚಿತ್ರಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ.
1975ರಲ್ಲಿ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಇದರ ಮೂಲಕ ಪಾರ್ವತಮ್ಮ ರಾಜ್‌ಕುಮಾರ್ ಅವರು 'ತ್ರಿಮೂರ್ತಿ', 'ಹಾಲು ಜೇನು', 'ಕವಿರತ್ನ ಕಾಳಿದಾಸ', 'ಜೀವನ ಚೈತ್ರ' ಸೇರಿದಂತೆ ಸುಮಾರು 80 ಚಿತ್ರಗಳನ್ನು ನಿರ್ಮಿಸಿದ್ದರು.
ಪಾರ್ವತಮ್ಮ ಅವರು1939ರಲ್ಲಿ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲಿ ಜನಿಸಿದ್ದರು. 2017ರ ಮೇ 31ರಂದು ಪಾರ್ವತಮ್ಮ ರಾಜ್‌ಕುಮಾರ್ ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.