ADVERTISEMENT

ಬಾಡಿ ಶೇಮಿಂಗ್‌ ಅನುಭವಿಸಿದ ‘ಮಿಲನ’ ನಟಿ ಪಾರ್ವತಿ ಮೆನನ್: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 11:15 IST
Last Updated 4 ಫೆಬ್ರುವರಿ 2026, 11:15 IST
<div class="paragraphs"><p>ನಟಿ ಪಾರ್ವತಿ ತಿರುವೋತ್‌</p></div>

ನಟಿ ಪಾರ್ವತಿ ತಿರುವೋತ್‌

   

ಚಿತ್ರ: ಇನ್‌ಸ್ಟಾಗ್ರಾಂ

‘ಮಿಲನ’ ಖ್ಯಾತಿಯ ತ್ರಿಭಾಷಾ ನಟಿ ಪಾರ್ವತಿ ಮೆನನ್ ಅವರ ಗ್ಲಾಮರಸ್ ಲುಕ್‌ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರ ಬೆನ್ನಲ್ಲೇ ನಟಿ ಪಾರ್ವತಿ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ.

ADVERTISEMENT

ಇತ್ತೀಚೆಗೆ ನಡೆದ ಸೆಲೆಬ್ರಿಟಿ ಕಾರ್ಯಕ್ರಮವೊಂದರಲ್ಲಿ ಸಾಕಷ್ಟು ಸ್ಟಾರ್ ನಟಿಯರು ಭಾಗಿಯಾಗಿದ್ದರು. ಅದರಲ್ಲಿ ಪಾರ್ವತಿ ಕೂಡ ಒಬ್ಬರಾಗಿದ್ದರು. ಇದೇ ವೇಳೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಬಂದಿದ್ದ ನಟಿಯ ವಿಡಿಯೊ ನೋಡಿದ ನೆಟ್ಟಿಗರು ಅವರ ದೇಹದ ಬಗ್ಗೆ ಕಮೆಂಟ್‌ ಹಾಕಿದ್ದಾರೆ. ಪಾರ್ವತಿ ಮೆನನ್ ಮೊದಲಿಗಿಂತ ದಪ್ಪ ಆಗಿದ್ದಾರೆ ಎಂಬೆಲ್ಲ ಕಮೆಂಟ್‌ಗಳು ಹರಿದಾಡಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ನಟಿಯ ಬಾಡಿ ಶೇಮಿಂಗ್ ಬಗ್ಗೆ ಮಾತಾಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಪಾರ್ವತಿ ಮೆನನ್ ಅವರು ಇದೇ ರೀತಿಯ ತೊಂದರೆ ಅನುಭವಿಸಿದ ಉದಾಹರಣೆಗಳು ಇವೆ. ಆದರೆ, ಇದಕ್ಕೆ ನಟಿ ಪಾರ್ವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಟಿ ಪಾರ್ವತಿ ಅವರು ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್‌ ಜೊತೆಗೆ ‘ಮಿಲನ’, ‘ಪೃಥ್ವಿ’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಆ ಬಳಿಕ ಕನ್ನಡದಲ್ಲಿ ‘ಅಂದರ್ ಬಾಹರ್’ ಬಿಟ್ಟು ಬೇರೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈಗ ಪಾರ್ವತಿ ಅವರು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ HRX ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೊಗಾಗಿ ನಿರ್ಮಿಸಲಾದ ವೆಬ್ ಸರಣಿಯಲ್ಲಿ ಪಾರ್ವತಿ ನಾಯಕಿಯಾಗಿ ನಟಿಸಲಿದ್ದಾರೆ. ಇದು ಹೃತಿಕ್ ರೋಷನ್ ಅವರ ಮೊದಲ ನಿರ್ಮಾಣವಾಗಿದೆ. ಇದು ಪಾರ್ವತಿ ಅವರ ಮೂರನೇ ಬಾಲಿವುಡ್ ಯೋಜನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.