
ಪವನ್ ಕಲ್ಯಾಣ್
ಎಕ್ಸ್ ಚಿತ್ರ
ತೆಲುಗಿನ ಸ್ಟಾರ್ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟವಾದ ಸಾಧನೆಯೊಂದನ್ನು ಮಾಡಿದ್ದಾರೆ. ಪ್ರಾಚೀನ ಜಪಾನಿನ ‘ಕೆಂಜುಟ್ಸು’ ಎಂಬ ಕತ್ತಿವರಸೆ ಕಲೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ಜಾಗತಿಕ ಮನ್ನಣೆ ಗಳಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಈ ಸಾಧನೆಗೆ ಜಪಾನಿನ ‘ಸೊಗೊ ಬುಡೋ ಕನ್ರಿ ಕೈ’ ಅವರು ಪ್ರತಿಷ್ಠಿತ ಐದನೇ ಡಾನ್ (5ನೇ ಡಾನ್) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಪವನ್ ಕಲ್ಯಾಣ್ ಅವರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಜಪಾನಿನ ಈ ಯುದ್ಧಕಲೆಗಳ ಅಭ್ಯಾಸ, ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವುದು ಈ ಗೌರವಕ್ಕೆ ಪ್ರಮುಖ ಕಾರಣವಾಗಿದೆ. ಎನ್ನಲಾಗಿದೆ.
ಮಾರ್ಷಲ್ ಆರ್ಟ್ಸ್‌ನಲ್ಲಿ ಆಸಕ್ತಿ ಇದ್ದ ಪವನ್ ಕಲ್ಯಾಣ್ ಅವರು ಸಿನಿಮಾ ಹಾಗೂ ರಾಜಕೀಯಕ್ಕಿಂತ ಮೊದಲೇ ಸಮರ ಕಲೆಗಳ ಅಭ್ಯಾಸವನ್ನು ಆರಂಭಿಸಿದ್ದರು. ಬಹು ಕಾಲದಿಂದಲೂ ಚೆನ್ನೈನಲ್ಲಿ ಕರಾಟೆ ಅಭ್ಯಾಸವನ್ನು ಮಾಡುತ್ತಿದ್ದರು. ನಂತರ ಅವರು ಜಪಾನಿನ ಸಮುರಾಯ್ ಸಮರ ಕಲೆಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಭಾರತದ ಪ‍್ರಮುಖ ಸಮರ ಕಲೆಗಳ ತಜ್ಞ ಪ್ರೊ. ಡಾ.ಸಿದ್ದಿಕ್ ಮಹಮೂದಿ ಅವರದಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹೊಸದಾಗಿ ಬಿಡುಗಡೆಯಾದ ವಿಡಿಯೊವೊಂದು ಅವರು 20 ನೇ ವಯಸ್ಸಿನಿಂದಲೇ ಸಮರ ಕಲೆಗಳನ್ನು ಕಲಿಯುವ ಮತ್ತು ಕರಗತ ಮಾಡಿಕೊಳ್ಳುವ ಪ್ರಯಾಣವನ್ನು ವಿವರಿಸುತ್ತದೆ. ಸದ್ಯ ಗೋಲ್ಡನ್ ಡ್ರಾಗನ್ಸ್ ಸಂಸ್ಥೆಯು ‘ಟೈಗರ್ ಆಫ್ ಮಾರ್ಷಲ್ ಆರ್ಟ್ಸ್’ ಎಂಬ ವಿಶಿಷ್ಟ ಬಿರುದನ್ನು ನೀಡಿ ಸನ್ಮಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.