ADVERTISEMENT

ಚಿತ್ರಗಳಲ್ಲಿ ನೋಡಿ: ಅಭಿಮಾನಿಗಳ ಪ್ರೀತಿಯ 'ಅಪ್ಪು'

ಬೆಂಗಳೂರು: ಚಿತ್ರನಟ ಪುನೀತ್ ರಾಜ್‌ಕುಮಾರ್ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.‘ಅರಸು’, ‘ಹುಡುಗರು’, ‘ಅಣ್ಣಾ ಬಾಂಡ್’, ‘ಪವರ್’, ‘ಯಾರೇ ಕೂಗಾಡಲಿ’, ‘ರಣ ವಿಕ್ರಮ’, ‘ದೊಡ್ಮನೆ ಹುಡ್ಗ’, ‘ರಾಜಕುಮಾರ ನಟಸಾರ್ವಭೌಮ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ಪುನೀತ್‌, 2002ರಲ್ಲಿ ‘ಅಪ್ಪು’ ಸಿನಿಮಾ ಮುಖಾಂತರ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರಕ್ಕಾಗಿ ಪುನೀತ್‌ ರಾಷ್ಟ್ರಪ್ರಶಸ್ತಿ ಪಡೆದಿದ್ದರು.

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 10:23 IST
Last Updated 29 ಅಕ್ಟೋಬರ್ 2021, 10:23 IST
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್   
ಡಾ.ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್, ಪಾರ್ವತಮ್ಮ
ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಿಹಿ ತಿನ್ನಿಸುತ್ತಿರುವ ಪಾರ್ವತಮ್ಮ
ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್
ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್
ಪತ್ನಿ ಅಶ್ವಿನಿ ಅವರೊಂದಿಗೆ ಪುನೀತ್ ರಾಜ್‌ಕುಮಾರ್
ಮಗಳ ಹುಟ್ಟುಹಬ್ಬದ ಸಮಾರಂಭದಲ್ಲಿ ಪುನೀತ್ ರಾಜ್‌ಕುಮಾರ್
ಶಿವರಾಜ್‌ ಕುಮಾರ್, ಪುನೀತ್ ರಾಜ್‌ಕುಮಾರ್, ಯಶ್
ನಟಿ ರಮ್ಯಾ ಮತ್ತು ಪುನೀತ್ ರಾಜ್‌ಕುಮಾರ್
ಬೆಂಗಳೂರು ಬುಲ್ಸ್‌ ತಂಡದೊಂದಿಗೆ ಪುನೀತ್ ರಾಜ್‌ಕುಮಾರ್
ಬೆಂಗಳೂರಿನ ಯೋಗ ಕೇಂಧ್ರದಲ್ಲಿ ಪುನೀತ್ ರಾಜ್‌ಕುಮಾರ್
‘ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ರಾಘವೇಂದ್ರ ರಾಜ್ ಕುಮಾರ್ ಜೊತೆ ಪುನೀತ್ ರಾಜ್‌ಕುಮಾರ್
ಶಿವರಾಜ್‌ ಕುಮಾರ್ ಜೊತೆ ಪುನೀತ್ ರಾಜ್‌ಕುಮಾರ್
ವಿಷ್ಣುವರ್ಧನ್ ಜೊತೆ ಪುನೀತ್ ರಾಜ್‌ಕುಮಾರ್
ಡಾ.ರಾಜ್‌ ಹುಟ್ಟೂರು ಗಾಜನೂರಿನಲ್ಲಿ ಹಿರಿಯರೊಬ್ಬರೊಂದಿಗೆ ಅಪ್ಪು ಸೆಲ್ಫಿ ತೆಗೆದುಕೊಂಡರು
ಸೋದರತ್ತೆ ನಾಗಮ್ಮ (ಡಾ.ರಾಜ್‌ ತಂಗಿ) ಅವರೊಂದಿಗೆ ‘ಪವರ್‌ ಸ್ಟಾರ್‌’
ದೊಡ್ಡಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್‌ ಅವರು ಹುಟ್ಟಿದ ‌ಮನೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಭೇಟಿ ವೀಕ್ಷಿಸಿದರು
ಡಾ.ರಾಜ್‌ ಕುಮಾರ್‌ ಅವರ ಅಚ್ಚುಮೆಚ್ಚಿನ ದೊಡ್ಡ ಆಲದ ಮರದ ಬುಡದಲ್ಲಿ ಪುನೀತ್ ರಾಜ್‌ಕುಮಾರ್
ಭಜರಂಗಿ –2 ಬಿಡುಗಡೆಪೂರ್ವ ಸಮಾರಂಭದಲ್ಲಿ ಶಿವರಾಜ್‌ಕುಮಾರ್‌, ಯಶ್‌ ಜೊತೆ ಹೆಜ್ಜೆ ಹಾಕಿದ ಪುನೀತ್‌ ರಾಜ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.