ADVERTISEMENT

ಬಹುಭಾಷಾ ಸಿನಿಮಾದಲ್ಲಿ ಪೂಜಾ!

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ನಟಿ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ   

ಕರಾವಳಿಯ ಬೆಡಗಿ ಪೂಜಾ ಹೆಗ್ಡೆ ಈಗ ತೆಲುಗು ಸಿನಿರಂಗದ ಟಾಪ್ ಹಿರೋಯಿನ್‌. ‘ಮುಗಮೂಡಿ’ ಎಂಬ ತಮಿಳು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಈಕೆ ತೆಲುಗು ಸಿನಿಮಾಗಳ ಮೂಲಕ ಹೆಸರು ಗಳಿಸಿದ್ದರು.

ತೆಲುಗಿನ ಟಾಪ್‌ ಹೀರೊಗಳಾದ ಜ್ಯೂನಿಯರ್ ಎನ್‌ಟಿಆರ್‌, ಮಹೇಶ್ ಬಾಬು, ಅಲ್ಲು ಅರ್ಜುನ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ ಪೂಜಾ. ಇಂತಿಪ್ಪ ಇವರಿಗೆ ಈಗ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

ಪೂಜಾ ತಮ್ಮ ಮುಂದಿನ ಚಿತ್ರದಲ್ಲಿ ಮಾಲಿವುಡ್‌ನ ದುಲ್ಕರ್ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಿಲಿದ್ದಾರಂತೆ.

ADVERTISEMENT

ಪೂಜಾ ಹಾಗೂ ದುಲ್ಕರ್ ಅಭಿನಯದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಹನು ರಾಘವಪುಡಿ ನಿರ್ದೇಶನದ ನೊಗ ಹೊರಲಿದ್ದು, ಸ್ವಪ್ನಾ ಸಿನಿಮಾ ಬ್ಯಾನರ್‌ನಡಿ ಸ್ವಪ್ನಾ ದತ್‌ ನಿರ್ಮಾಣ ಮಾಡಲಿದ್ದಾರೆ.

ಸ್ವಪ್ನಾ ಅವರ ತಂದೆ ಅಶ್ವಿನಿ ದತ್‌ ವೈಜಯಂತಿ ಬ್ಯಾನರ್‌ನಡಿ ನಿರ್ಮಾಣ ಮಾಡಿದ ಮಹಾನಟಿ ಸಿನಿಮಾದಲ್ಲಿ ದುಲ್ಕರ್ ಅಭಿನಯಿಸಿದ್ದರು. ಹೊಸ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್ ರೆಡಿ ಇದ್ದು ಲಾಕ್‌ಡೌನ್ ಮುಗಿದ ತಕ್ಷಣ ಚಿತ್ರ ಸೆಟ್ಟೆರಲಿದೆ.

‘ಮಹಾನಟಿ’ ನಂತರ ದುಲ್ಕರ್‌ ತೆಲುಗು ಭಾಷೆಯಲ್ಲಿ ನಟಿಸುತ್ತಿರುವ ಎರಡನೇ ಚಿತ್ರ ಇದು. ಚಿತ್ರಕ್ಕೆ ಸಂಬಂಧಿಸಿದ ತಯಾರಿ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ನಿರ್ದೇಶಕ ಹನು ಅವರು ಪೂಜಾ ಜೊತೆ ಮಾತುಕತೆ ನಡೆಸಿದ್ದಾರೆ. ವಿಡಿಯೊ ಕರೆ ಮೂಲಕ ಪೂಜಾಗೆ ಚಿತ್ರಕಥೆ ವಿವರಿಸಿದ್ದರು.

ಇದು ಕಮರ್ಷಿಯಲ್‌ ಸಿನಿಮಾ. ದುಲ್ಕರ್‌ ಅವರು ತಮಿಳಿನ ‘ಹೇ ಸಿನಾಮಿಕ’ ಸಿನಿಮಾದಲ್ಲೂ ನಟಿಸುತ್ತಿದ್ದು, ಲಾಕ್‌ಡೌನ್‌ ತೆರವಾದ ನಂತರ ಇದರ ಶೂಟಿಂಗ್‌ ಪುನರಾರಂಭಗೊಳ್ಳಲಿದೆ. ಇದರಲ್ಲಿ ಕಾಜಲ್‌ ಅಗರ್‌ವಾಲ್‌ ಹಾಗೂ ಆದಿತಿ ರಾವ್‌ ಹೈದರಿ ನಟಿಸಿದ್ದಾರೆ.

ಪೂಜಾ ಹೆಗ್ಡೆ ‘ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅಖಿಲ್‌ ಅಕ್ಕಿನೇನಿ ಜೊತೆ ಪೂಜಾ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.