ADVERTISEMENT

ಪ್ರಭಾಸ್ ಮುಂದಿನ ಚಿತ್ರದಲ್ಲಿ ಚೈತ್ರಾ ಜೆ. ಆಚಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 13:13 IST
Last Updated 23 ಅಕ್ಟೋಬರ್ 2025, 13:13 IST
<div class="paragraphs"><p>ಪ್ರಭಾಸ್ ಮತ್ತು&nbsp;ಚೈತ್ರಾ ಜೆ. ಆಚಾರ್</p></div>

ಪ್ರಭಾಸ್ ಮತ್ತು ಚೈತ್ರಾ ಜೆ. ಆಚಾರ್

   

ಬೆಂಗಳೂರು: ತಮ್ಮ 46ನೇ ವರ್ಷದ ಜನ್ಮದಿನ ಆಚರಿಸುತ್ತಿರುವ ತೆಲುಗು ನಟ ಪ್ರಭಾಸ್ ಅವರ ಮುಂದಿನ ಸಿನಿಮಾ 'ಫೌಝಿ'ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ಜೆ.ಆಚಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂಭ್ರಮ ಹಂಚಿಕೊಂಡಿರುವ ಚೈತ್ರಾ, 'ಫೌಝಿ ಚಿತ್ರತಂಡದ ಭಾಗವಾಗಲು ಖುಷಿಯಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ADVERTISEMENT

ನಿರ್ದೇಶಕ ಹನು ರಾಘವಪುಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಟಿ ಇಮಾನ್ವಿ ಇಸ್ಮಾಯಿಲ್, ಬಾಲಿವುಡ್ ನಟ ಅನುಪಮ್ ಖೇರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಹನು ನಿರ್ದೇಶನದಲ್ಲಿ 2022ರಲ್ಲಿ ತೆರೆಕಂಡ ತೆಲುಗು ಚಿತ್ರ 'ಸೀತಾರಾಮಂ' ಸೂಪರ್ ಹಿಟ್ ಆಗಿತ್ತು. ದುಲ್ಖರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.