ಜಪಾನ್‌ನಲ್ಲಿ ಜನವರಿ 3ಕ್ಕೆ ‘ಕಲ್ಕಿ 2898 AD’ ಸಿನಿಮಾ ಬಿಡುಗಡೆ
ನವದೆಹಲಿ: ಫೌಜಿ ಸಿನಿಮಾದ ಚಿತ್ರೀಕರಣದ ವೇಳೆ ನಟ ಪ್ರಭಾಸ್ ಗಾಯಗೊಂಡಿದ್ದಾರೆ. ಹೀಗಾಗಿ ಜಪಾನ್‌ನಲ್ಲಿ ಬಿಡುಗಡೆಯಾಗುತ್ತಿರುವ ‘ಕಲ್ಕಿ 2898 ಎಡಿ’ ಚಿತ್ರದ ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರಭಾಸ್ ಅವರ ಕಾಲುಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಕಲ್ಕಿ ಪ್ರೀಮಿಯರ್ ಶೋಗೆ ಪ್ರಭಾಸ್ ಅವರು ಗೈರಾಗುತ್ತಿರುವ ಕಾರಣ ಜಪಾನ್‌ನಲ್ಲಿನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಜಪಾನ್‌ಗೆ ನಿರ್ದೇಶಕ ನಾಗ್ ಅಶ್ವಿನ್ ಮತ್ತು ಇತರ ಕಲಾವಿದರು ತೆರಳುತ್ತಿದ್ದಾರೆ.
ಡಿ.18ರಂದು ಜಪಾನ್‌ನಲ್ಲಿ ಕಲ್ಕಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಅಧಿಕೃತವಾಗಿ 2025ರ ಜನವರಿ 3 ರಂದು ಜಪಾನ್‌ನ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ಭಾರತದಲ್ಲಿ 2024 ರ ಜೂನ್ 27ರಂದು ತೆಲುಗು, ಹಿಂದಿ, ತಮಿಳು, ಮಲಯಾಳ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಲ್ಕಿ ಚಿತ್ರ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.