ADVERTISEMENT

‘ರಾಜಾ ಡಿಲಕ್ಸ್’ನಲ್ಲಿ ಸಿಕ್ಕ ಪ್ರಭಾಸ್‌, ಕೃತಿ ಶೆಟ್ಟಿ, ಮಾಳವಿಕ ಮೋಹನನ್‌...!

​ಪ್ರಜಾವಾಣಿ ವಾರ್ತೆ
Published 31 ಮೇ 2022, 9:44 IST
Last Updated 31 ಮೇ 2022, 9:44 IST
ಪ್ರಭಾಸ್‌
ಪ್ರಭಾಸ್‌   

ಹೈದರಾಬಾದ್:‘ರಾಜಾ ಡಿಲಕ್ಸ್’ನಲ್ಲಿ ನಟ ಪ್ರಭಾಸ್‌, ನಟಿ ಕೃತಿ ಶೆಟ್ಟಿ, ಮಾಳವಿಕಾಮೋಹನನ್‌ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ ಎಂಬ ಮಾಹಿತಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಹೌದು, ಪ್ರಭಾಸ್‌ ಅವರು‘ರಾಜಾ ಡಿಲಕ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯರಾಗಿಮಲಯಾಳಂ ನಟಿ ಮಾಳವಿಕಾ ಮೋಹನನ್, ‘ಉಪ್ಪೇನಾ’ ಸಿನಿಮಾ ಖ್ಯಾತಿಯ ಕೃತಿ ಶೆಟ್ಟಿ ಕೂಡ ಅಭಿನಯಿಸುತ್ತಿದ್ದಾರೆ.

ಸಿನಿಮಾದ ಶೂಟಿಂಗ್‌ ಸಂದರ್ಭದಲ್ಲಿ ಪ್ರಭಾಸ್‌, ಮಾಳವಿಕ ಅವರು ಕಾಣಿಸಿಕೊಂಡಿದ್ದಾರೆ ಎಂದು ಟಾಲಿವುಡ್‌ ಮಾಧ್ಯಮಗಳು ವರದಿ ಮಾಡಿವೆ. ಈಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

ADVERTISEMENT

ಇಲ್ಲಿನ ಹೊರವಲಯದಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿ ಬೃಹತ್‌ ಸೆಟ್‌ ಹಾಕಲಾಗಿದೆ. ಕೆಲವು ದಿನಗಳ ಕಾಲ ಪ್ರಭಾಸ್‌ ಕೂಡ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

‘ರಾಜಾ ಡಿಲಕ್ಸ್’ ಸಿನಿಮಾವನ್ನುಮಾರುತಿ ನಿರ್ದೇಶನ ಮಾಡುತ್ತಿದ್ದಾರೆ.'ಆರ್‌ಆರ್‌ಆರ್' ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.