ADVERTISEMENT

ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡ್ಯಾನ್ಸರ್ ಪ್ರಭು ದೇವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 11:59 IST
Last Updated 18 ನವೆಂಬರ್ 2021, 11:59 IST
 ‘ಪೋಣ್ ಮಾಣಿಕ್‌ವೇಲ್’ ಸಿನಿಮ ಪೋಸ್ಟರ್
‘ಪೋಣ್ ಮಾಣಿಕ್‌ವೇಲ್’ ಸಿನಿಮ ಪೋಸ್ಟರ್   

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಕೋರಿಯೊಗ್ರಾಫರ್, ನಟ, ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯಾಗಿರುವ ಪ್ರಭು ದೇವ ಅವರು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಭು ದೇವ ಪೊಲೀಸ್ ಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಪೋಣ್ ಮಾಣಿಕ್‌ವೇಲ್’ ಸಿನಿಮಾ ನಾಳೆ (ನವೆಂಬರ್ 19) ಪ್ರಮುಖ ಓಟಿಟಿ ವೇದಿಕೆಯಾದ ‘ಹಾಟ್‌ಸ್ಟಾರ್‌’ನಲ್ಲಿ ಬಿಡುಗಡೆಯಾಗಲಿದೆ.

ಸಸ್ಪೆನ್ಸ್ ಹಾಗೂ ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ‘ಪೋಣ್ ಮಾಣಿಕ್‌ವೇಲ್’ ಸಿನಿಮಾವನ್ನು ‘ಕಂದಾಯಿನ್’ ಖ್ಯಾತಿಯ ಎ.ಸಿ ಮುಗಿಲ್ ಚೆಲ್ಲಪ್ಪನ್ ಅವರು ನಿರ್ದೇಶಿಸಿದ್ದಾರೆ. ನೇಮಿಚಂದ್ ಜಾಬ್ಯಾಕ್ ನಿರ್ಮಿಸಿದ್ದು, ಇದು ತಮಿಳಿನಲ್ಲಿಮಾತ್ರ ತೆರೆ ಕಾಣುತ್ತಿದೆ. ನಾಯಕಿಯಾಗಿ ನಿವೇತಾ ಪೇತುರಾಜ್ ಅಭಿನಯಸಿದ್ದಾರೆ.

ADVERTISEMENT

ಇನ್ನೊಂದು ವಿಶೇಷವೆಂದರೆ ಪ್ರಭು ದೇವ ಅವರ 50 ನೇ ಚಿತ್ರ ಇದಾಗಿದ್ದು, ಸಿನಿಮಾ ಯಶಸ್ವಿಯಾಗಲೆಂದು ಚಿತ್ರರಂಗದಗಣ್ಯರು ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.