ಬೆಂಗಳೂರಿನಲ್ಲಿ ಜೂನ್27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ದುನಿಯಾ ವಿಜಯ್
ಪ್ರಜಾವಾಣಿ ಚಿತ್ರ
ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ
ದುನಿಯಾ ವಿಜಯ್, ಚಿತ್ರ: ಭೀಮ
‘ಭೀಮ’ ಚಿತ್ರದ ನಟನೆಗಾಗಿ ದುನಿಯಾ ವಿಜಯ್ ಈ ಪ್ರಶಸ್ತಿ ಮುಡಿಗೇರಿಸಿಕೊಂಡರು. ನಟ ರಮೇಶ್ ಅರವಿಂದ್ ಈ ಪ್ರಶಸ್ತಿಯನ್ನು ವಿತರಿಸಿದರು.
‘ಸಲಗ’ ಬಳಿಕ ‘ಭೀಮ’ ಹಿಟ್ ಆಯಿತು. ನಿರ್ದೇಶಕನಾಗಿ ನನ್ನನ್ನು ಕರೆದುಕೊಂಡು ಹೋಗುತ್ತಿರುವ ಕನ್ನಡದ ಜನತೆಗೆ ಈ ಪ್ರಶಸ್ತಿ ಅರ್ಪಣೆ. ನನ್ನ ಚಿತ್ರದಲ್ಲಿ, ಹಾಡುಗಳಲ್ಲಿ ತುಂಬ ಬಿಲ್ಡಪ್ ಇಡುವುದಿಲ್ಲ. ಗ್ರೌಂಡ್ ಲೆವೆಲ್ ಜನ ಸಿನಿಮಾ ನೋಡುವುದು. ಅವರಿಗೆ ಸಹಜ ಎನ್ನಿಸಬೇಕು. ಅವರಿಗೆ ಸಿನಿಮಾ ಮಾಡಬೇಕು. ಎಲ್ಲರಿಗೂ ಸಿನಿಮಾದಲ್ಲಿ ನಡೆಯುತ್ತಿರುವುದು ನಮ್ಮ ಮನೆಯಲ್ಲಿ ನಡೆಯುತ್ತಿರುವ ಸನ್ನಿವೇಶ ಅನ್ನಿಸಬೇಕು. ಚಿತ್ರದ ಪ್ರತಿಯೊಬ್ಬ ಕಲಾವಿದ ಅನುಭವಿಸುವ ಅವಮಾನಗಳು ಪಾತ್ರವಾಗಬೇಕು. ಅದಕ್ಕೆ ಯಶಸ್ಸು ಜಾಸ್ತಿ. ಉತ್ತರ ಕರ್ನಾಟಕ ನನ್ನ ಬದುಕಿನ ಮತ್ತೊಂದು ತವರು. ಅದು ಯಾರಿಗೂ ಬೆಲೆ ಕಟ್ಟಲಾಗದಷ್ಟು ಋಣವನ್ನು ನನ್ನ ತಲೆ ಮೇಲೆ ಇಟ್ಟಿದೆ. ಹೀಗಾಗಿ ನನ್ನ ಚಿತ್ರಗಳಲ್ಲಿ ಉತ್ತರ ಕರ್ನಾಟಕದ ಸೊಗಡು ಇರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.