ADVERTISEMENT

LIVE: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ, 'ಕಾಂತಾರ'ಕ್ಕೆ ಅತ್ಯುತ್ತಮ‌ ಚಿತ್ರ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2023, 10:58 IST
Last Updated 5 ಜೂನ್ 2023, 10:58 IST
   

ಕಾರ್ಯಕ್ರಮಕ್ಕೆ ಕ್ಷಣಗಣನೆ 

ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಿಬ್ಬಂದಿ ವೇದಿಕೆ ಪೂಜೆ ನೆರವರಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

ಬಹು ನಿರೀಕ್ಷಿತ  ‘ಪ್ರಜಾವಾಣಿ ಕನ್ನಡ ಸಿನಿಮಾ ಸಮ್ಮಾನ’ ಪ್ರದಾನ ಸಮಾರಂಭ ಇಂದು ಸಂಜೆ 6.30ಕ್ಕೆ ನಡೆಯಲಿದೆ.

ಗಣ್ಯರ ಸಮಾಗಮ

ಕನ್ನಡ ಚಿತ್ರರಂಗದ ಪ್ರಮುಖ ನಟ- ನಟಿಯರು, ಸಾಂಸ್ಕೃತಿಕ ಲೋಕದ ದಿಗ್ಗಜರು, ಮುಖ್ಯಮಂತ್ರಿಯವರೂ ಒಳಗೊಂಡಂತೆ ನಾಡಿನ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ADVERTISEMENT

ಪ್ರತಿಭಾನ್ವಿತರಿಗೆ ಪುರಸ್ಕಾರ ಪ್ರದಾನ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತರನ್ನು 24 ವಿಭಾಗಗಳಲ್ಲಿ ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

ಮತದಾನದ ಮೂಲಕ ಪುರಸ್ಕೃತರ ಆಯ್ಕೆ

15 ವಿಭಾಗಗಳ ಪುರಸ್ಕಾರಗಳಿಗೆ ಪುರಸ್ಕೃತರನ್ನು ಚಿತ್ರರಂಗದ ಹಲವು ವಿಭಾಗಗಳಲ್ಲಿನ ವೃತ್ತಿಪರರು ಮತದಾನ ಮಾಡಿ ಆಯ್ಕೆ ಮಾಡಿರುವುದು ವಿಶೇಷ. ನಾಲ್ಕು ವಿಭಾಗಗಳಲ್ಲಿ ಜನರೇ ತಮ್ಮಿಷ್ಟದ –ನಾಯಕ, ನಾಯಕಿ, ಸಿನಿಮಾ ಹಾಗೂ ಉತ್ತಮ ಸಂಗೀತ– ಆಯ್ಕೆ ಮಾಡಿದ್ದಾರೆ.

ಪ್ರಜಾವಾಣಿ@75ರ ಸಂದರ್ಭದ ಈ ಸಮ್ಮಾನ ಪತ್ರಿಕೆಯ ಮೊದಲ ಸಾಹಸ

ಪ್ರಜಾವಾಣಿ@75ರ ಸಂದರ್ಭದ ಈ ಸಮ್ಮಾನ ಪತ್ರಿಕೆಯ ಮೊದಲ ಸಾಹಸ. ಕನ್ನಡ ಚಿತ್ರರಂಗದ ಹಬ್ಬವೇ ಇದಾಗಿರುವಂತೆ ಚಿತ್ರೋದ್ಯಮ ಸಂಭ್ರಮಿಸುತ್ತಿದೆ.

ಗಣ್ಯರ ಮೆಚ್ಚುಗೆ

ಕಾಂಗ್ರೆಸ್ ನಾಯಕ ಬಿ.ಕೆ ಚಂದ್ರಶೇಖರ

‘ವಿಶ್ವಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಕನ್ನಡ ಚಿತ್ರರಂಗದ ಹೊಳೆವ ನಕ್ಷತ್ರಗಳನ್ನು, ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಅರ್ಥಪೂರ್ಣ ಕೆಲಸ ಇದಾಗಿದೆ’ ಎಂದು ಚಿತ್ರರಂಗದ ದಿಗ್ಗಜರು ಬಣ್ಣಿಸಿದ್ದಾರೆ.

ಪುರಸ್ಕೃತರ ಆಯ್ಕೆ ಪ್ರಕ್ರಿಯೆ

ಇಪ್ಪತ್ತು ಪರಿಣತರ ತಂಡ 2022ರಲ್ಲಿ ತೆರೆಕಂಡ ಕನ್ನಡ ಸಿನಿಮಾಗಳನ್ನು ವೀಕ್ಷಿಸಿ, 23 ವಿಭಾಗಗಳಿಗೆ ನಾಮ ನಿರ್ದೇಶನಗಳನ್ನು ಮಾಡಿತ್ತು. ಆ ಪೈಕಿ, ಚಿತ್ರೋದ್ಯಮಕ್ಕೆ ಹೊಸ ದಿಕ್ಕು ಕಲ್ಪಿಸಬಲ್ಲ ನಾಲ್ಕು ವಿಭಾಗಗಳಿಗೆ ಪ್ರಮುಖ ತೀರ್ಪುಗಾರರು ಅರ್ಹರನ್ನು ಆರಿಸಿದ್ದಾರೆ.

ಪ್ರಮುಖ ತೀರ್ಪುಗಾರರು

ಗಿರೀಶ ಕಾಸರವಳ್ಳಿ, ಹಂಸಲೇಖ, ಯೋಗರಾಜ್ ಭಟ್, ಪ್ರಕಾಶ್ ರಾಜ್‌, ಶ್ರುತಿ ಹರಿಹರನ್, ವಿದ್ಯಾಶಂಕರ್ ಹಾಗೂ ಸುಮನಾ ಕಿತ್ತೂರು ಪ್ರಮುಖ ತೀರ್ಪುಗಾರರು. ಜೀವಮಾನ ಶ್ರೇಷ್ಠ ಸಾಧನೆಗಾಗಿಯೂ ಸಮ್ಮಾನ ನಡೆಯಲಿದೆ. 

ಸಾಂಸ್ಕೃತಿಕ ಕಾರ್ಯಕ್ರಮ

ಸಿನಿಮಾದ ತಾರೆಗಳೇ ಮಿಂಚುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮಾನಕ್ಕೆ ಯಾರೆಲ್ಲ ಭಾಜನರಾಗಿದ್ದಾರೆ ಎಂಬ ಪ್ರಶ್ನೆಗೆ ದೊರೆಯುವ ಉತ್ತರಗಳು ಸಮಾರಂಭದ ಹೆಗ್ಗುರುತುಗಳಾಗಿವೆ. 

ಗಣ್ಯರ ಆಗಮನ

ಕಾರ್ಯಕ್ರಮಕ್ಕೆ ಆಗಮಿಸಿದ ತೀರ್ಪುಗಾರರಲ್ಲಿ ಓರ್ವರಾದ ಗಿರೀಶ್ ಕಾಸರವಳ್ಳಿ

ಗಣ್ಯರ ಸಮಾಗಮ

ಪ್ರಜಾವಾಣಿ ಸಿನಿ ಸಮ್ಮಾನ

ಸಮಾರಂಭದ ಕ್ಷಣ ಕ್ಷಣದ ಸಾಕ್ಷಾತ್‌ ಮಾಹಿತಿಗಾಗಿ ವೀಕ್ಷಿಸಿ: prajavani.net

ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದಾರೆ.

ನೃತ್ಯ ಪ್ರದರ್ಶನ

ನಟಿ ಭಾವನಾ ರಾವ್ ಅವರಿಂದ ನೃತ್ಯ ಪ್ರದರ್ಶನ

ಅತ್ಯುತ್ತಮ ಚೊಚ್ಚಲ ನಿರ್ದೇಶನ ಪುಶಸ್ತಿ ಪ್ರಕಟ

1. ಪ್ರವೀಣ್‌ ಕೃಪಾಕರ್‌ – ತಲೆದಂಡ

2. ಕಿರಣ್‌ರಾಜ್‌ ಕೆ – 777 ಚಾರ್ಲಿ

3.  ಶ್ರೀಧರ್‌ ಶಿಕಾರಿಪುರ – ಧರಣಿ ಮಂಡಲ ಮಧ್ಯದೊಳಗೆ

4. ಹೇಮಂತ್‌ ಕುಮಾರ್‌ ಎಲ್. – ತುರ್ತು ನಿರ್ಗಮನ

5. ಕರಣ್‌ ಅನಂತ್‌ ಹಾಗೂ ಅನಿರುದ್ಧ ಮಹೇಶ್‌ – ಹರಿಕಥೆ ಅಲ್ಲ ಗಿರಿಕಥೆ

ಪ್ರಜಾವಾಣಿ ಸಿನಿ ಸಮ್ಮಾನ 2023 ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಕಿರಣ್ ರಾಜ್ ಕೆ.

ಚಿತ್ರ : 777 ಚಾರ್ಲಿ

777 ಚಾರ್ಲಿ ಸಿನಿಮಾ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದುಕೊಂಡಿದೆ

‘ಅತ್ಯುತ್ತಮ ಚೊಚ್ಚಲ ನಿರ್ದೇಶನ‌‘ ವಿಭಾಗದಲ್ಲಿ ‘777 ಚಾರ್ಲಿ‘ ಸಿನಿಮಾದ ನಿರ್ದೇಶಕ ಕಿರಣ್‌ರಾಜ್‌ ಕೆ. ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಿರಣ್‌ರಾಜ್ ಮಾತು

ನನ್ನ ಚೊಚ್ಚಲ ಸಿನಿಮಾ. ಪ್ರಜಾವಾಣಿ ಪ್ರಶಸ್ತಿ ಪಡೆಯಲು ತುಂಬಾ ಸಂತೋಷವಾಗುತ್ತಿದೆ. ಕಥೆ ವಿಶಿಷ್ಟವಾಗಿರಬೇಕೆಂಬ ಯೋಚನೆಯಿತ್ತು. ನನ್ನ ಜೀವನದಲ್ಲೇ ಆದ ಘಟನೆಗಳ ಆಧಾರಿತ. ನಾಯಿ ಹಾಗೂ ಮನುಷ್ಯನ ಸಂಬಂಧದ ಬಗ್ಗೆ ಮಾಡಬಹುದು ಅಂತ ಯೋಚಿಸಿ, ಬರೆದೆ.
-ಕಿರಣ್‌ರಾಜ್

ಕಿಶೋರ್ ಕುಮಾರ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ

ನಾನು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬಂದವನು. ನನಗೇ ಪ್ರಶಸ್ತಿ ಸಿಗುತ್ತದೆ ಎಂದು ಗೊತ್ತಿರಲಿಲ್ಲ. ಪ್ರಜಾಪ್ರಭುತ್ವದ ಆಧಾರ ಸ್ತಂಭ ಪತ್ರಿಕೋದ್ಯಮ. ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದ ಪತ್ರಿಕೆ ಪ್ರಜಾವಾಣಿ. ಸಣ್ಣ ಸಣ್ಣ ಸಿನಿಮಾಗಳಲ್ಲಿ ಹೊಸದನ್ನು ಹೇಳುವುದನ್ನು ಪ್ರಯತ್ನ ಮಾಡುತ್ತಿರುವೆ.
–ಕಿಶೋರ್ ಕುಮಾರ್

ಅತ್ಯುತ್ತಮ ಸಂಕಲನ ಪ್ರಶಸ್ತಿ ಪ್ರದಾನ

ವಿಜೇತರು: ಇಬ್ಬರು ಮಾನ್ಸೂನ್ ರಾಗಕ್ಕೆ ಕೆ. ಕಲ್ಯಾಣ್ ಹಾಗೂ ವೇದ ಚಿತ್ರಕ್ಕೆ ನಾಗೇಂದ್ರ ಪ್ರಸಾದ್

ಅತ್ಯುತ್ತಮ ಸಂಕಲ‌ನ ವಿಭಾಗದಲ್ಲಿ ಇಬ್ಬರಿಗೆ ಪ್ರಶಸ್ತಿ

ಅತ್ಯುತ್ತಮ ಸಂಕಲ‌ನ ವಿಭಾಗದಲ್ಲಿ ಇಬ್ಬರಿಗೆ ಪ್ರಶಸ್ತಿ ಕೆಜಿಎಫ್‌ – 2 ಚಿತ್ರಕ್ಕೆ ಉಜ್ವಲ್‌ ಕುಲಕರ್ಣಿ ಕಾಂತಾರ ಚಿತ್ರಕ್ಕೆ ಪ್ರತೀಕ್ ಶೆಟ್ಟಿ ಹಾಗೂ ಕೆ.ಎಂ ಪ್ರಕಾಶ್‌

ಅತ್ಯುತ್ತಮ ಗೀತ ಸಾಹಿತ್ಯ ವಿಭಾಗದಲ್ಲಿ ಇಬ್ಬರಿಗೆ ಪ್ರಶಸ್ತಿ

ಅತ್ಯುತ್ತಮ ಗೀತ ಸಾಹಿತ್ಯ ವಿಭಾಗದಲ್ಲಿ ಇಬ್ಬರಿಗೆ ಪ್ರಶಸ್ತಿ ಕೆ.‌ಕಲ್ಯಾಣ್ - ಚಿತ್ರ: ಮಾನ್ಸೂನ್ ರಾಗ ನಾಗೇಂದ್ರ ಪ್ರಸಾದ್ - ವೇದ

ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬೊಮ್ಮಾಯಿ ಆಗಮನ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದರು.

ಅತ್ಯುತ್ತಮ ನಟ ವಿಭಾಗದಲ್ಲಿ ದಿ. ಸಂಚಾರಿ ವಿಜಯ್‌ಗೆ ಪ್ರಶಸ್ತಿ

ಅತ್ಯುತ್ತಮ ನಟ ವಿಭಾಗದಲ್ಲಿ ದಿ. ಸಂಚಾರಿ ವಿಜಯ್‌ಗೆ ಪ್ರಶಸ್ತಿ.

ನಟ ಅನಂತ್‌ನಾಗ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ,  ದಿ ಪ್ರಿಂಟರ್ಸ್‌ ಮೈಸೂರು ಸಂಸ್ಥೆಯ ಜಂಟಿ ನಿರ್ದೇಶಕ ಕೆ.ಎನ್‌ ತಿಲಕ್‌ ಕುಮಾರ್ ಹಾಗೂ ನಿರ್ದೇಶಕರಾದ ಕೆ.ಎನ್‌ ಶಾಂತಕುಮಾರ್‌  ಅವರು ಪ್ರಶಸ್ತಿ ಪ್ರದಾನ ಮಾಡಿದರು.

777 ಚಾರ್ಲಿ ಸಿನಿಮಾಕ್ಕೆ ಆ್ಯನಿಮೇಷನ್ ಪ್ರಶಸ್ತಿ  

777 ಚಾರ್ಲಿ ಸಿನಿಮಾಕ್ಕೆ ಪ್ರಜಾವಾಣಿ ಸಿನಿ ಸಮ್ಮಾನ 2023 ಅತ್ಯುತ್ತಮ ವಿಎಫ್ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್ ಪ್ರಶಸ್ತಿ

ಗಾನವಿ ಲಕ್ಷ್ಮಣ್ ಅವರಿಗೆ ಅತ್ಯುತ್ತಮ‌ ನಟಿ ಪ್ರಶಸ್ತಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023 ಅತ್ಯುತ್ತಮ‌ ನಟಿ ಪ್ರಶಸ್ತಿ ಗಾನವಿ ಲಕ್ಷ್ಮಣ್ ಅವರಿಗೆ.

ಚಿತ್ರ: ವೇದ

ಆಸ್ಕರ್‌ಗಿಂತ ದೊಡ್ಡ ಪ್ರಶಸ್ತಿ ಸಿನಿಮಾ ಸಮ್ಮಾನ್
- ನಟಿ ಜಯಶ್ರಿ

ಉಮಾಶ್ರೀ ಅವರಿಗೆ ಅತ್ಯುತ್ತಮ‌ ಷೋಷಕ ನಟಿ ಪ್ರಶಸ್ತಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023

ಅತ್ಯುತ್ತಮ‌ ಷೋಷಕ ನಟಿ ಪ್ರಶಸ್ತಿ: ಉಮಾಶ್ರೀ

ಚಿತ್ರ: ವೇದ

ಅತ್ಯುತ್ತಮ ಚಿತ್ರ ‘ಕಾಂತಾರ‘

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023: ಅತ್ಯುತ್ತಮ ಚಿತ್ರ ‘ಕಾಂತಾರ‘

ಸಾಮಾಜಿಕ ಪರಿಣಾಮ ಬೀರಿದ ಚಿತ್ರ: ತಲೆದಂಡ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ - 2023

ಸಾಮಾಜಿಕ ಪರಿಣಾಮ ಬೀರಿದ ಚಿತ್ರ: ತಲೆದಂಡ

ಅರ್ಜುನ್ ಜನ್ಯರಿಂದ ಸಂಗೀತ ಸುಧೆ

ಅತ್ಯುತ್ತಮ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ

ಪ್ರಜಾವಾಣಿ ಸಿನಿ ಸಮ್ಮಾನ 2023 ಈಗ ಅತ್ಯುತ್ತಮ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ

ಚಿತ್ರ: ಕಾಂತಾರ

ಅತ್ಯುತ್ತಮ ಧ್ವನಿಗ್ರಹಣ, ಶಬ್ದವಿನ್ಯಾಸ ಪ್ರಶಸ್ತಿ: ಕಾಂತಾರ

ಪ್ರಜಾವಾಣಿ ಸಿನಿ ಸಮ್ಮಾನ 2023 ಅತ್ಯುತ್ತಮ ಧ್ವನಿಗ್ರಹಣ, ಶಬ್ದವಿನ್ಯಾಸ ಪ್ರಶಸ್ತಿ: ಕಾಂತಾರ

ಕಾಂತಾರ ಚಿತ್ರಕ್ಕೆ ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ

ಪ್ರಜಾವಾಣಿ ಸಿನಿ ಸಮ್ಮಾನ 2023 ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಕಾಂತಾರ ಚಿತ್ರಕ್ಕೆ

ಕಾಂತಾರ ಸಿನಿಮಾಗೆ ಜನ ಮೆಚ್ಚಿದ ಅತ್ಯುತ್ತಮ ಚಿತ್ರ ಪ್ರಶಸ್ತಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023: ಕಾಂತಾರ ಸಿನಿಮಾಗೆ ಜನ ಮೆಚ್ಚಿದ ಅತ್ಯುತ್ತಮ ಚಿತ್ರ ಪ್ರಶಸ್ತಿ

ಜನ ಮೆಚ್ಚಿದ ಸಂಗೀತ ಪ್ರಶಸ್ತಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023

ಜನ ಮೆಚ್ಚಿದ ಸಂಗೀತ ಪ್ರಶಸ್ತಿ ಅಜನೀಶ್ ಲೋಕನಾಥ್ ಹಾಡು: ಸಿಂಗಾರ ಸಿರಿಯೆ

ಚಿತ್ರ: ಕಾಂತಾರ

ಸಿದ್ ಶ್ರೀರಾಮ್‌ಗೆ ಅತ್ಯುತ್ತಮ ಹಿನ್ನಲೆ ಗಾಯಕ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023 ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ ಶ್ರೀರಾಮ್

ಚಿತ್ರ: ಲವ್ 360

ಜನ‌ ಮೆಚ್ಚಿದ ನಟಿ ಪ್ರಶಸ್ತಿ ಗೆದ್ದ ಅದಿತಿ ಪ್ರಭುದೇವ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2023 ಜನ‌ ಮೆಚ್ಚಿದ ನಟಿ ಪ್ರಶಸ್ತಿ ಗೆದ್ದ ಅದಿತಿ ಪ್ರಭುದೇವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.