ADVERTISEMENT

ಕೆಜಿಎಫ್–2: ತಾಯಿ ಸಮಾಧಿ ಸ್ಥಳಾಂತರ ದೃಶ್ಯದ ಹಿನ್ನೆಲೆ ಬಿಚ್ಚಿಟ್ಟ ನೀಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 4:27 IST
Last Updated 21 ಏಪ್ರಿಲ್ 2022, 4:27 IST
ಪ್ರಶಾಂತ್ ನೀಲ್: ಐಎಎನ್‌ಎಸ್ ಚಿತ್ರ
ಪ್ರಶಾಂತ್ ನೀಲ್: ಐಎಎನ್‌ಎಸ್ ಚಿತ್ರ   

ಬೆಂಗಳೂರು: ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್–2 ಚಿತ್ರದ ಹಲವು ವಿಶಿಷ್ಟ ಅಂಶಗಳಲ್ಲಿ ಹೀರೊ, ತಾಯಿಯ ಸಮಾಧಿಯನ್ನು ಸ್ಥಳಾಂತರಮಾಡಿಸುವ ದೃಶ್ಯವೂ ಒಂದು.

ತಾಯಿ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹೊಂದಿರುವ ನಾಯಕ ರಾಕಿ ತಮ್ಮ ಹುಟ್ಟೂರಿನಲ್ಲಿದ್ದ ತಾಯಿಯ ಸಮಾಧಿಯನ್ನು ತಂದು ಕೆಜಿಎಫ್‌ನಲ್ಲಿ ಪ್ರತಿಷ್ಠಾಪಿಸುತ್ತಾರೆ. ಬದುಕಿದ್ದಾಗ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ತಂದೆಯನ್ನೇ ಅದರ ಕಾವಲಿಗೆ ಹಾಕುತ್ತಾನೆ. ಈ ದೃಶ್ಯ ಅಕ್ಷರಶಃ ಚಿತ್ರ ಪ್ರೇಮಿಗಳ ಮೈಜುಮ್ಮೆನಿಸುವಂತಿದೆ. ಚಿತ್ರದಲ್ಲಿ ಈ ದೃಶ್ಯ ಸೇರಿಸಿದ್ದರ ಹಿಂದೆ ತಮ್ಮ ನಿಜ ಜೀವನದ ಹಿನ್ನೆಲೆ ಇದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಜ್ಜಿ ಎಂದರೆ ನೀಲ್‌ಗೆ ಪಂಚಪ್ರಾಣ

ಹೌದು, ಚಿಕ್ಕಂದಿನಿಂದ ಪ್ರೀತಿ ಕೊಟ್ಟು ಬೆಳೆಸಿದ್ದ ಅಜ್ಜಿ ಬಗ್ಗೆ ನಿರ್ದೇಶಕ ನೀಲ್ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಆಂಧ್ರ ಪ್ರದೇಶದ ತಮ್ಮ ಹುಟ್ಟೂರಿನಲ್ಲಿ ಅಜ್ಜಿ ನಿಧನರಾದಾಗ ಅಲ್ಲಿನ ಸ್ಮಶಾನದಲ್ಲೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಆಗ ನನಗೆ ಅಂತ ಒಂದು ಸ್ವಂತ ಮನೆ ಇರಲಿಲ್ಲ. ಈಗ ಎಲ್ಲವೂ ಇದೆ. ಅಜ್ಜಿಯ ಸಮಾಧಿಯನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳೋಣ ಎನಿಸುತ್ತಿರುತ್ತದೆ. ಈ ಚಿಂತನೆಯೇ ಚಿತ್ರದ ಆ ದೃಶ್ಯಕ್ಕೆ ದಾರಿಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.

ADVERTISEMENT

ನಾನು ಎಷ್ಟೇ ಬೈದರೂ ನನ್ನಜ್ಜಿ ನನಗೆ ಊಟ, ಪ್ರೀತಿ ಕೊಟ್ಟು ನೋಡಿಕೊಂಡರು ಎಂದು ನೀಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.