ADVERTISEMENT

‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ಪ್ರಿಯಾಂಕಾ 
ಪ್ರಿಯಾಂಕಾ    

‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ, ‘ಏಳುಮಲೆ’ಯ ನಾಯಕಿಯಾಗಿ ನಟಿಸಿದ್ದ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆಯಾಗಿದೆ. ಕಿರಣ್‌ ವಿಶ್ವನಾಥ್‌ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಪ್ರಿಯಾಂಕಾ ಬಣ್ಣಹಚ್ಚಲಿದ್ದಾರೆ.

‘ಕಾಟೇರ’ ಚಿತ್ರದ ನಿರ್ದೇಶಕ ತರುಣ್‌ಕಿಶೋರ್ ಸುಧೀರ್‌ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ ಪ್ರಿಯಾಂಕಾ ಸಿನಿಜೀವನದ ಮೊದಲ ಹೆಜ್ಜೆ. ಈ ಸಿನಿಮಾವೇ ಅವರ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿದೆ. ಮೈಸೂರಿನ ಪ್ರಿಯಾಂಕಾ ಆಚಾರ್‌ ‘ಏಳುಮಲೆ’ಯಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ತಮ್ಮ ಎರಡನೇ ಸಿನಿಮಾಗೆ ಪ್ರಿಯಾಂಕಾ ಸಜ್ಜಾಗಿದ್ದಾರೆ. 

ಕಿಚ್ಚ ಸುದೀಪ್ ಆಪ್ತ ಬರಹಗಾರರಲ್ಲಿ ಗುರುತಿಸಿಕೊಂಡಿರುವ ಕಿರಣ್, ‘ರನ್ನ’, ‘ವಿಕ್ಟರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಿರಣ್ ಮೊದಲ ಸಿನಿಮಾದ ಹೀರೊ ಯಾರು ಎನ್ನುವುದನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದಿದೆ ಚಿತ್ರತಂಡ. ಗೌರಿ ಆರ್ಟ್ಸ್ ಬ್ಯಾನರ್‌ನ ಚೊಚ್ಚಲ ಚಿತ್ರ ಇದಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.