ADVERTISEMENT

ದಾಂಪತ್ಯಕ್ಕೆ ಕಾಲಿರಿಸಿದ ಪ್ರಿಯಾಂಕಾ– ನಿಕ್

ಪಿಟಿಐ
Published 1 ಡಿಸೆಂಬರ್ 2018, 19:27 IST
Last Updated 1 ಡಿಸೆಂಬರ್ 2018, 19:27 IST
ನಿಕ್ ಜೋನಸ್– ಪ್ರಿಯಾಂಕಾ ಚೋಪ್ರಾ ಜೋಡಿ
ನಿಕ್ ಜೋನಸ್– ಪ್ರಿಯಾಂಕಾ ಚೋಪ್ರಾ ಜೋಡಿ   

ಜೋಧಪುರ:ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಗಾಯಕ ನಿಕ್ ಜೋನಸ್, ಜೋಧಪುರದ ಉಮೈದ್‌ ಭವನ ಅರಮನೆಯಲ್ಲಿ ಶನಿವಾರ ಕ್ಯಾಥೊಲಿಕ್ ಸಂಪ್ರದಾಯದ ಪ್ರಕಾರ ವಿವಾಹ ಬಂಧನಕ್ಕೆ ಒಳಗಾದರು.

ಭಾನುವಾರ ಈ ಜೋಡಿ ಹಿಂದೂ ಸಂಪ್ರದಾಯದ ಪ್ರಕಾರವೂ ಮದುವೆಯಾಗಲಿದೆ.

ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಸೋದರ ಸಿದ್ಧಾರ್ಥ್, ಸೋದರಿಯರಾದ ಪರಿಣೀತಿ ಚೋಪ್ರಾ, ಮನ್ನಾರ ಚೋಪ್ರಾ, ನಿಕ್‌ ಪೋಷಕರಾದ ಪೌಲ್ ಕೆವಿನ್ ಹಾಗೂ ಡಿನೈಸ್‌, ಸೋದರ ಕೆವಿನ್ ಹಾಗೂ ಅವರ ಪತ್ನಿ ಡೇನಿಯಲ್, ಮತ್ತೊಬ್ಬ ಸೋದರ ಜೋ ಹಾಗೂ ಭಾವಿ ಪತ್ನಿ ನಟಿ ಸೋಫಿ ಟರ್ನರ್‌ ಪಾಲ್ಗೊಂಡಿದ್ದರು.

ADVERTISEMENT

ಉಳಿದಂತೆ ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ, ಪುತ್ರಿ ಇಶಾ ಹಾಗೂ ಪುತ್ರರಾದ ಆಕಾಶ್‌, ಅನಂತ್,ಅಮೆರಿಕದ ನಟಿ ಎಲಿಜಬೆತ್‌ ಚೇಂಬರ್ಸ್‌, ಬ್ರಿಟನ್‌ ಗಾಯಕಿ ಜಾಸ್ಮಿನ್‌ ವಾಲಿಯ, ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ, ವಸ್ತ್ರ ವಿನ್ಯಾಸಕ ಸವ್ಯಸಾಚಿ ಇದ್ದರು.

ಸಮಾರಂಭಕ್ಕೆಮೊಬೈಲ್‌ ತರದಂತೆಅತಿಥಿಗಳಿಗೆ ಸೂಚನೆ ನೀಡಲಾಗಿತ್ತು ಹಾಗೂ ಆಹ್ವಾನಿತರಿಗೆ ಮಾತ್ರ ಪ್ರವೇಶವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.