ADVERTISEMENT

ನಾನು ಮತ್ತು ನಿಕ್ ಇಬ್ಬರೂ ಬಯಸುತ್ತಿರುವುದು ಮದ್ಯ –ನಿದ್ದೆ: ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 12:09 IST
Last Updated 25 ನವೆಂಬರ್ 2021, 12:09 IST
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್   

ಬೆಂಗಳೂರು: ಹಾಲಿವುಡ್ ದಂಪತಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ಜೋನಸ್ಮಧ್ಯೆ ವಿರಸಮೂಡಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಪ್ರಿಯಾಂಕಾ, ನಾವಿಬ್ಬರೂ ಜತೆಯಾಗಿಯೇ ಇದ್ದೇವೆ ಎಂಬ ಸಂದೇಶ ನೀಡಿದ್ದರು.

ಅದಾದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಗರ್ಭಿಣಿ, ಮಗುವನ್ನು ಬಯಸುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ಆದರೆ ಗರ್ಭಿಣಿಯಾಗಿರುವ ವಿಚಾರವನ್ನು ನಿರಾಕರಿಸಿರುವ ಪ್ರಿಯಾಂಕಾ ಚೋಪ್ರಾ, ನಾನು ಮತ್ತು ನಿಕ್ ನಿಜಕ್ಕೂ ಬಯಸುತ್ತಿರುವುದು ಕುಡಿದು ಚೆನ್ನಾಗಿ ನಿದ್ದೆ ಮಾಡಬೇಕು ಎನ್ನುವುದಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಒಟಿಟಿ ವೇದಿಕೆಯೊಂದರ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ಜೋನಸ್ಮುಂದೆಯೇ ಈ ಹೇಳಿಕೆ ನೀಡಿದ್ದಾರೆ.

ಪ್ರಿಯಾಂಕಾ ಹೇಳಿಕೆ ಕೇಳಿ ಒಂದು ಕ್ಷಣ ನಿಕ್ ದಂಗಾಗಿದ್ದಾರೆ. ಆದರೆ ಅವರ ಹೇಳಿಕೆ ಕಾರ್ಯಕ್ರಮದಲ್ಲಿದ್ದವರಿಗೆ ನಗು ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.