
ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಪ್ಪು ಜತೆಗಿನ ಆತ್ಮೀಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.
ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿರುವ ಸಂತೋಷ್ ಅವರು, ‘ಯುವರತ್ನ’ ಚಿತ್ರೀಕರಣ ಮಾಡಿದ ಪ್ರತಿ ಕಾಲೇಜಿನಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ₹2–5 ಲಕ್ಷ ಹಣ ಹಾಗೂ ಕಂಪ್ಯೂಟರ್‌ಗಳನ್ನು ಕೊಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಯಾಕಾಗಿ ಲಕ್ಷ ಲಕ್ಷ ಕೊಡುತ್ತೀರಾ ಎಂದು ನಾನು ಕೇಳಿದ್ದೆ, ಅದಕ್ಕೆ ಅಪ್ಪು ‘ನಾನು ಓದಿಲ್ಲ, ಶಿಕ್ಷಣ ಪಡೆಯುವವರಿಗಾದರೂ ಸಹಕಾರಿಯಾಗಲಿ' ಎನ್ನುತ್ತಿದ್ದರು.
ಅವರ ನಿಸ್ವಾರ್ಥ ಸೇವೆಗೆ ಜನ ಅವರನ್ನು ಈಗಲೂ ದೇವರಂತೆ ಕಾಣುತ್ತಿದ್ದಾರೆ’ ಎಂದು ಪುನೀತ್ ಅವರ ಬಗ್ಗೆ ಕೊಂಡಾಡಿದ್ದಾರೆ.
ಅಶ್ವಿನಿ ಮೇಡಂ ಅವರ ಮುಖದಲ್ಲಿ ಈಗಲೂ ಅಷ್ಟೇ ಬೇಸರ, ನೋವು ಇದೆ. ಆದರೆ ಎಂದಿಗೂ ತೋರಿಸಿಕೊಂಡಿಲ್ಲ.
ದಾನ, ಧರ್ಮ, ಸಹಜತೆ, ಸೌಜನ್ಯ, ಸಂಸ್ಕಾರಕ್ಕೆ ಪುನೀತ್ ರಾಜ್‍ಕುಮಾರ್ ಒಂದೇ ಹೆಸರು ಎಂದು ಅಪ್ಪು ಅವರ ಸರಳತೆ ಬಗ್ಗೆ ಸಂತೋಷ್ ಆನಂದ್ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.