
ನಟಿ ರಚಿತಾ ರಾಮ್
ಕನ್ನಡದ ನಟಿ ರಚಿತಾ ರಾಮ್ ಅವರು ಡಬಲ್ ಸಂಭ್ರಮದಲ್ಲಿದ್ದಾರೆ. ನಟಿ ರಚಿತಾ ರಾಮ್ ನಟನೆಯ ಬಹುನಿರೀಕ್ಷಿತ ಎರಡು ಸಿನಿಮಾಗಳು ಇದೇ ತಿಂಗಳಲ್ಲಿ ಒಂದೇ ದಿನ ಬಿಡುಗಡೆಯಾಗುತ್ತಿವೆ. ಸಾಮಾನ್ಯವಾಗಿ ಜನಪ್ರಿಯ ನಟ, ನಟಿಯರ ಎರಡೆರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವುದು ಅಪರೂಪ.
ಆದರೆ, ಈಗ ರಚಿತಾ ರಾಮ್ ನಟನೆಯ ಎರಡು ಸಿನಿಮಾಗಳು ಒಂದೇ ದಿನ ತೆರೆ ಮೇಲೆ ಬರಲು ಸಜ್ಜಾಗಿವೆ. ಒಂದು ಸಿನಿಮಾದಲ್ಲಿ ನಟಿ ರಚಿತಾ ರಾಮ್ ರೆಬೆಲ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ.
ನಟಿ ರಚಿತಾ ರಾಮ್
ಲ್ಯಾಂಡ್ಲಾರ್ಡ್
ನಟ ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ರಾಜ್ ಬಿ. ಶೆಟ್ಟಿ ನಟಿಸಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾ ಇದೇ ಜನವರಿ 23ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಜಡೇಶ್ ಕುಮಾರ್ ಹಂಪಿ ಅವರು ನಿರ್ದೇಶನ ಮಾಡಿದ್ದಾರೆ. ಹೇಮಂತ್ ಗೌಡ ಕೆಎಸ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಟ್ರೇಲರ್, ಸುಂದರ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಈ ಸಿನಿಮಾವನ್ನು ಸತ್ಯ ಪ್ರಕಾಶ್ ಅವರು ನಿರ್ಮಾಣ ಮಾಡಿದ್ದು, ನಿರೀಕ್ಷೆ ಹೆಚ್ಚಿಸಿದೆ.
‘ಕಲ್ಟ್’ ಚಿತ್ರದ ಪೋಸ್ಟರ್ ಹಂಚಿಕೊಂಡು ನಟಿ ರಚಿತಾ ರಾಮ್ ಸಂಕ್ರಾತಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಕಲ್ಟ್ ಸಿನಿಮಾ
‘ಬನಾರಸ್’ ಸಿನಿಮಾ ಬಳಿಕ ‘ಕಲ್ಟ್’ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸಲು ಝೈದ್ ಖಾನ್ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ, ನಟಿ ಮಲೈಕಾ ಟಿ. ವಾಸುಪಾಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕೂಡ ಜನವರಿ 23ರಂದು ರಿಲೀಸ್ ಆಗುತ್ತಿದೆ. ಈ ಹಿಂದೆ ಜ.16ರಂದು ಕಲ್ಟ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು.
ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರು ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಟ್ರೇಲರ್ನಲ್ಲಿ ನಟಿಯ ಒಂದು ಮುಖವನ್ನು ಮಾತ್ರ ಬಹಿರಂಗ ಪಡಿಸಿದೆ. ಅವರ ಒಂದು ಮುಖವನ್ನು ರಹಸ್ಯವಾಗಿ ಇಡಲಾಗಿದೆ. ಈ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡುವಂತೆ ಮಾಡಿದ್ದಾರೆ. ‘ಉಪಾಧ್ಯಕ್ಷ’ ಚಿತ್ರ ನಿರ್ದೇಶನ ಮಾಡಿರುವ ಅನಿಲ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.