
ನಟಿ ರಾಧಿಕಾ ಪಂಡಿತ್
ಚಿತ್ರಕೃಪೆ: Radhika Pandit
ಕನ್ನಡದ ಖ್ಯಾತ ನಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಅಪರೂಪಕ್ಕೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
‘ನಂದಗೋಕುಲ’ ಮತ್ತು ‘ಸುಮಂಗಲಿ’ ಧಾರಾವಾಹಿಗಳ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದ ರಾಧಿಕಾ ಪಂಡಿತ್ ಅವರು ತಮ್ಮ ನಟನೆಯನ್ನು ಆರಂಭಿಸಿ ಚಂದನವನದಲ್ಲಿ ಖ್ಯಾತಿ ಪಡೆದುಕೊಂಡರು.
ಆದರೆ ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದುಕೊಂಡು, ಮಕ್ಕಳ ಆರೈಕೆಯಲ್ಲಿ ನಟಿ ರಾಧಿಕಾ ಪಂಡಿತ್ ಸಕ್ರಿಯರಾಗಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಈಗ ಚಂದದ ಫೋಟೊಗಳನ್ನು ಹಂಚಿಕೊಂಡ ನಟಿ ಅದರ ಜೊತೆಗೆ ‘ಯಾವುದೇ ಪೋಸ್ ನೀಡುವ ಒತ್ತಡವಿಲ್ಲದೆ, ಸಹಜವಾಗಿ ಮೂಡಿಬಂದ ಚಿತ್ರಗಳೇ ಯಾವಾಗಲೂ ಬೆಸ್ಟ್ ಅನಿಸುತ್ತವೆ.’ ಎಂದು ಬರೆದಿದ್ದಾರೆ.
’ಒತ್ತಡವಿಲ್ಲದ ಫೋಟೊಗಳ ಹಿಂದೆ ಆತ್ಮೀಯ ಸ್ನೇಹಿತನ ತಾಳ್ಮೆ ಇದೆ‘ ಎಂದು ಅಡಿಬರಹ ನೀಡಿದ್ದಾರೆ. ಹಾಗೂ ಫೋಟೊ ಕ್ರೆಡಿಟ್ ಅನ್ನು ವಂಶ್ ಅವರಿಗೆ ನೀಡಿದ್ದಾರೆ.
ಮದುವೆಗೂ ಮೊದಲು ರಾಧಿಕಾ ಪಂಡಿತ್ ಅವರು ಯಶ್ ಜತೆ, ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವರ್ಡ್, ಮೊಗ್ಗಿನ ಮನಸ್ಸು, ಡ್ರಾಮ ಚಿತ್ರದಲ್ಲಿ ನಟಿಸಿದ್ದಾರೆ. ಇವುಗಳ ಜೊತೆಗೆ ಇತರೆ ಸಿನಿಮಾಗಳಾದ ಅದ್ದೂರಿ, ದೊಡ್ಡನೆ ಹುಡ್ಗ, ಅಲೆಮಾರಿ, ಸೇರಿದಂತೆ ಅನೇಕ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಇದೀಗ ನಟಿ ಹಂಚಿಕೊಂಡ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ‘ನಿಮ್ಮ ನಗು ತುಂಬಾ ಸಹಜವಾಗಿದೆ’, ‘ವಂಶ್ ಅವರ ತಾಳ್ಮೆಗೆ ಒಂದು ಸಲಾಂ ಹೇಳಲೇಬೇಕು’, ‘ನಮಗೂ ಇಂತಹ ಒಬ್ಬ ಫ್ರೆಂಡ್ ಬೇಕು‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.