ADVERTISEMENT

‘ರಾಗ ಭೈರವಿ’ ಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 12:24 IST
Last Updated 7 ಫೆಬ್ರುವರಿ 2021, 12:24 IST
ಹೊಸಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌ ಅವರು ನಿರ್ದೇಶಕ ಎಸ್‌. ವೆಂಕಟೇಶ್‌ ಕೊಟ್ಟೂರು, ನಿರ್ಮಾಪಕ ಸಾ. ಹರೀಶ್‌ ಅವರನ್ನು ಸನ್ಮಾನಿಸಿದರು
ಹೊಸಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌ ಅವರು ನಿರ್ದೇಶಕ ಎಸ್‌. ವೆಂಕಟೇಶ್‌ ಕೊಟ್ಟೂರು, ನಿರ್ಮಾಪಕ ಸಾ. ಹರೀಶ್‌ ಅವರನ್ನು ಸನ್ಮಾನಿಸಿದರು   

ಹೊಸಪೇಟೆ: ನಿರ್ದೇಶಕ ಎಸ್‌. ವೆಂಕಟೇಶ್‌ ಕೊಟ್ಟೂರು, ನಿರ್ಮಾಪಕ ಸಾ. ಹರೀಶ್‌ ಅವರ ನಿರ್ಮಾಣದ ‘ರಾಗ ಭೈರವಿ’ ಸಂಗೀತ ಪ್ರಧಾನ ಚಲನಚಿತ್ರದ ಮೊದಲ ಪ್ರದರ್ಶನ ಶನಿವಾರ ಸಂಜೆ ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು.

ಬಳಿಕ ಮಾತನಾಡಿದ ವೆಂಕಟೇಶ್‌ ಕೊಟ್ಟೂರು, ‘ಅಳಿಸುವ, ನಗಿಸುವ ಶಕ್ತಿ ಸಿನಿಮಾಕ್ಕೆ ಇದೆ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಜೊತೆಗೆ ಉತ್ತಮ ಸಂದೇಶ ಸಾರುವ ಚಿತ್ರಗಳು ಹೆಚ್ಚೆಚ್ಚೂ ಬರಬೇಕು’ ಎಂದರು.

‘ನಿರ್ದೇಶಕನಾಗಲು ಪುಟ್ಟಣ ಕಣಗಾಲ್, ಕೆ.ವಿಶ್ವನಾಥ್ ಹಾಗೂ ಬಾಲಚಂದರ್ ಸ್ಫೂರ್ತಿಯಾದರು. ಡಾ. ರಾಜ್ ಕುಮಾರ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಅವರ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿದವು. ಬಳ್ಳಾರಿ ಜಿಲ್ಲೆಯವನಾದ ನನ್ನ ಚಿತ್ರದ ಪ್ರೀಮಿಯರ್ ಪ್ರದರ್ಶನ ಹೊಸಪೇಟೆಯಲ್ಲಿ ನಡೆದಿರುವುದು ಖುಷಿ ತಂದಿದೆ’ ಎಂದು ಹೇಳಿದರು.

ADVERTISEMENT

ಸಾ.ಹರೀಶ್, ಸಂಗೀತ ಭಾರತಿ ಸಂಸ್ಥೆಯ ಎಚ್‌.ಪಿ. ಕಲ್ಲಂ ಭಟ್‌, ಪ್ರಾಚಾರ್ಯ ಎಸ್‌.ಎಂ. ಶಶಿಧರ್‌, ಹಿರಿಯ ರಂಗ ಕಲಾವಿದೆ ಕೆ. ನಾಗರತ್ನಮ್ಮ, ಸಂಗೀತ ನಿರ್ದೇಶಕ ಚಾರುಚಂದ್ರ, ತಾರಿಹಳ್ಳಿ ವೆಂಕಟೇಶ್, ಭಾನುಮತಿ, ಎಚ್.ಎಂ.ನೂರ್ ಅಹಮದ್, ಪ್ರಾಧ್ಯಾಪಕರಾದ ನಿರಂಜನ, ದಿವಾಕರ್, ಪಲ್ಲವ ವೆಂಕಟೇಶ, ಹಿರಿಯ ವೈದ್ಯ ಡಾ. ಮಹಾಬಲೇಶ್ವರ ರೆಡ್ಡಿ, ಕನ್ನಡ ಕಲಾ ಸಂಘದ ಚಂದ್ರಶೇಖರ್, ಬದರೀಶ್, ಕೆಂಚನಗೌಡ, ಸೊ.ದಾ.ವಿರುಪಾಕ್ಷಗೌಡ, ಅಬ್ದುಲ್ ಸಮದ್, ವೆಂಕನಗೌಡರು, ಪೂರ್ಣಿಮಾ ಗುರುರಾಜ್, ಮೊಹಮ್ಮದ್ ರಫಿ, ವೇಣುಗೋಪಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.