ADVERTISEMENT

ರಾಜ್. ಬಿ. ಶೆಟ್ಟಿ: ನಟನೆಗೂ ಸೈ, ವಾಲಿಬಾಲ್ ಆಟಕ್ಕೂ ಸೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2026, 9:05 IST
Last Updated 8 ಜನವರಿ 2026, 9:05 IST
   

ನಟ, ನಿರ್ದೇಶಕ ರಾಜ್. ಬಿ. ಶೆಟ್ಟಿ ಅವರು ಸ್ನೇಹಿತರ ಜತೆ ವಾಲಿಬಾಲ್ ಆಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್. ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ನಟನೆ, ನಿರ್ದೇಶನದ ಮೂಲಕ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ತೆರೆಕಂಡ ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದಲ್ಲಿ ರಾಜ್ . ಬಿ. ಶೆಟ್ಟಿ ಅವರು ಸಾಫ್ಟ್‌ವೇರ್ ಉದ್ಯೋಗಿ ವಿನಯ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ, ರಾಜ್ ಬಿ ಶೆಟ್ಟಿ ಅವರು ‘ಕರಾವಳಿ’,  'ರಕ್ಕಸಪುರದೋಳ್’ ಚಿತ್ರಗಳ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ', 'ಸ್ವಾತಿ ಮುತ್ತಿನ ಮಳೆ ಹನಿಯೇ', 'ಟೋಬಿ',  'ಸು ಫ್ರಮ್ ಸೋ' ಚಿತ್ರಗಳಲ್ಲಿ ಭಿನ್ನವಾದ ಪಾತ್ರಗಳಿಗೆ  ಬಣ್ಣಹಚ್ಚುವ ಮೂಲಕ ಹೆಸರುಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT