ADVERTISEMENT

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ; ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಮೃತ್ಯುಂಜಯ ಬೋಸ್
Published 16 ಸೆಪ್ಟೆಂಬರ್ 2021, 8:55 IST
Last Updated 16 ಸೆಪ್ಟೆಂಬರ್ 2021, 8:55 IST
ರಾಜ್ ಕುಂದ್ರಾ: ಪಿಟಿಐ ಚಿತ್ರ
ರಾಜ್ ಕುಂದ್ರಾ: ಪಿಟಿಐ ಚಿತ್ರ   

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಸ್ಥಾಪಕರಾದ ರಾಜ್ ಕುಂದ್ರಾ ಮತ್ತು ಅವರ ಬ್ರಿಟನ್‌ನಲ್ಲಿರುವ ಸೋದರ ಸಂಬಂಧಿ, ಲಂಡನ್‌ನ ಕೆನ್ರಿನ್ ಗ್ರೂಪ್‌ನ ಅಧ್ಯಕ್ಷರಾದ ಪ್ರದೀಪ್ ಬಕ್ಷಿ ಈ ದಂಧೆಯ ಸೂತ್ರಧಾರರು ಎನ್ನಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ಕ್ರೈಂ ಬ್ರ್ಯಾಂಚ್-ಸಿಐಡಿ, ಈ ಪ್ರಕರಣದಲ್ಲಿ 1,500 ಪುಟಗಳ ಮೊದಲ ಪೂರಕ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ.

ADVERTISEMENT

ರಾಜ್ ಕುಂದ್ರಾ ಮತ್ತು ಆತನ ಸಹಚರರಯಾನ್ ಥೋರ್ಪ್ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಸದ್ಯ, ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಭಾರತದಲ್ಲಿ ನಿಷೇಧಿಸಲಾಗಿರುವ ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ ವಿಯಾನ್ ಮತ್ತು ಕೆನ್ರಿನ್ ಕಂಪನಿಗಳು ಅವುಗಳನ್ನು ಹಾಟ್‌ಶಾಟ್ಸ್ ಆ್ಯಪ್‌ಗೆ ಅಪ್ಲೋಡ್ ಮಾಡುತ್ತಿದ್ದವು. ಚಂದಾದಾರಿಕೆ ನೀಡಿ, ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಿದ್ದವು ಎಂದು ಉಲ್ಲೇಖಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಗೆಹ್ನಾ ವಶಿಷ್ಠ್ (32), ಯಾಸ್ಮಿನ್ ಖಾನ್ (40), ಮೋನು ಜೋಶಿ (28), ಪ್ರತಿಭಾ ನಲವಡೆ (33), ಅತಿಫ್ ಅಹಮದ್ (24), ದೀಪಂಕರ್ ಖಾಸ್ನವೀಸ್ (38), ಭಾನುಸೂರ್ಯ ಠಾಕೂರ್ (26) ತನ್ವೀರ್ ಹಶ್ಮಿ (40) ಮತ್ತು ಉಮೇಶ್ ಕಾಮತ್ (39) ಅವರನ್ನು ಸಹ ಬಂಧಿಸಲಾಗಿದ್ದು, ಈಗಾಗಲೇ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.