ADVERTISEMENT

RRR ಚಿತ್ರ ಮೆಚ್ಚಿದ ಜೇಮ್ಸ್ ಕ್ಯಾಮರೂನ್: ನಂಬಲಾಗುತ್ತಿಲ್ಲ ಎಂದ ರಾಜಮೌಳಿ

ಐಎಎನ್ಎಸ್
Published 16 ಜನವರಿ 2023, 6:13 IST
Last Updated 16 ಜನವರಿ 2023, 6:13 IST
   

ಲಾಸ್ ಏಂಜಲಸ್: ಜನಪ್ರಿಯ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ತಮ್ಮ 'ಆರ್‌ಆರ್‌ಆರ್' ಚಿತ್ರವನ್ನು 10 ನಿಮಿಷಗಳ ಕಾಲ ವಿಶ್ಲೇಷಣೆ ಮಾಡಿರುವುದನ್ನು ನಂಬಲಾಗುತ್ತಿಲ್ಲ ಎಂದು ಎಸ್‌.ಎಸ್.ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜಮೌಳಿ, 'ಟೈಟಾನಿಕ್' ಮತ್ತು 'ಅವತಾರ್' ನಂತಹ ವಿಶ್ವಶ್ರೇಷ್ಠ ಚಲನಚಿತ್ರಗಳನ್ನು ನಿರ್ದೇಶಿಸಿರುವ ಕ್ಯಾಮರೂನ್‌ ಅವರೊಂದಿಗಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಒಂದು ಚಿತ್ರದಲ್ಲಿ, ವಿಶ್ವಶ್ರೇಷ್ಠ ನಿರ್ದೇಶಕರಿಬ್ಬರು ಚರ್ಚೆ ನಡೆಸುತ್ತಿದ್ದಾರೆ. ‘ಶ್ರೇಷ್ಠ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ಆರ್‌ಆರ್‌ಆರ್‌ ಚಿತ್ರ ವೀಕ್ಷಿಸಿದ್ದಾರೆ ಮತ್ತು ಚಿತ್ರವನ್ನು ಮೆಚ್ಚಿಕೊಂಡರು. ತಮ್ಮ ಪತ್ನಿ ಸುಜಿಗೆ ಕೂಡ ಚಿತ್ರ ನೋಡಲು ಶಿಫಾರಸು ಮಾಡಿದರು. ನೀವು ಹೇಳಿದಂತೆ ನಾನು ಈಗ ವಿಶ್ವದ ಅತಿ ಎತ್ತರದ ಜಾಗದಲ್ಲಿರುವೆ. ನಮಗಾಗಿ ಸಮಯ ನೀಡಿದ ಇಬ್ಬರಿಗೂ ಧನ್ಯವಾದಗಳು’ಎಂದು ಟ್ವೀಟ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.