ADVERTISEMENT

ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 9:21 IST
Last Updated 10 ನವೆಂಬರ್ 2025, 9:21 IST
<div class="paragraphs"><p>ರಾಜೇಶ್ ಕೃಷ್ಣನ್</p></div>

ರಾಜೇಶ್ ಕೃಷ್ಣನ್

   

ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಮಧುರ ಕಂಠಕ್ಕೆ ಮನಸೋಲದವರಿಲ್ಲ. ತಮ್ಮ ಗಾಯನದ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ವಿದೇಶಿಗರು ಕೂಡ ಇವರ ಗಾನಕ್ಕೆ ತಲೆದೂಗಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ADVERTISEMENT

ಅಮೆರಿಕಾದಲ್ಲಿ ಕನ್ನಡ ರಾಜೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ರಾಜೇಶ್ ಅವರು, ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಮಾತ್ರ ರಂಜಿಸದೆ, ‘ನಗುವ ನಯನ ಮಧುರ ಮೌನ’ ಹಾಡನ್ನು ಹಾಡಿ ವಿದೇಶಿಗರ ಗಮನ ಸೆಳೆದಿದ್ದಾರೆ.

ರಾಜೇಶ್ ಕೃಷ್ಣನ್ ಅವರು ‘ಎದೆ ತುಂಬಿ ಹಾಡುವೆನು’, ‘ಸರಿಗಮಪ’ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

'ನೂರು ಜನ್ಮಕ್ಕೂ', 'ಉಸಿರೇ ಉಸಿರೇ', 'ಯಾರೋ ಕಣ್ಣಲ್ಲಿ ಕಣ್ಣನಿಟ್ಟು', 'ಟೆಲಿಫೋನ್ ಗೆಳತಿ', 'ಪ್ರೀತಿಯೇ ನಿನ್ನ', 'ಹೊಂಬಳೆ ಹೊಂಬಳೆ’ ಸೇರಿದಂತೆ ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿ ‘ಮೆಲೋಡಿ ಕಿಂಗ್’ ಎಂದೇ ಖ್ಯಾತಿ ಪಡದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.