ರಜನಿಕಾಂತ್ ಅಭಿನಯದ ಜೈಲರ್–2ನಲ್ಲೂ ನಟ ಶಿವರಾಜ್‌ಕುಮಾರ್
ಚಿತ್ರ ಕೃಪೆ: ಎಕ್ಸ್
ಮುಂಬೈ: ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಚಂದನವನದ ನಟ ಶಿವರಾಜ್ ಕುಮಾರ್ ಅವರು ರಜನಿಕಾಂತ್ ನಟನೆಯ ಜೈಲರ್–2ನಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ‘45’ ಪ್ರಚಾರದಲ್ಲಿ ತೊಡಗಿರುವ ಶಿವರಾಜ್‌ಕುಮಾರ್ ಅವರು ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡರು.
‘ಹೌದು, ನಾನು ಜೈಲರ್ –2 ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದೇನೆ, ನನ್ನ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದು ಹೇಳಿದರು.
ರಜನಿಕಾಂತ್ ಅವರು ಮಾರ್ಚ್‌ನಲ್ಲಿ ಜೈಲರ್ –2 ಚಿತ್ರೀಕರಣವನ್ನು ಚೆನ್ನೈನಲ್ಲಿ ಆರಂಭಿಸಿದ್ದಾರೆ. ಎರಡನೇ ಭಾಗದ ಚಿತ್ರೀಕರಣ 20 ದಿನ ಕೇರಳದಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಜೈಲರ್ –2ನಲ್ಲಿ ಶಿವರಾಜ್‌ಕುಮಾರ್ ಅವರೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಹೊಸ ಮಾಹಿತಿ ಅಭಿಮಾನಿಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಕುತೂಹಲ ಮೂಡಿಸಿದೆ.
ವರದಿಗಳ ಪ್ರಕಾರ, ಶಿವರಾಜ್‌ಕುಮಾರ್ ಅವರು 15 ದಿನ ಕಾಲ್‌ಶೀಟ್ ನೀಡಿದ್ದಾರೆ.
‘ಜೈಲರ್’ನಲ್ಲಿ ನರಸಿಂಹ ಎನ್ನುವ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದರು.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಜೈಲರ್- 2 ಮೂಡಿಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.