
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ ಸಿನಿಮಾ ‘ತಲೈವಾ 173’ ಅನ್ನು ನಿರ್ಮಾಪಕ ಸಿಬಿ ಚಕ್ರವರ್ತಿ ಅವರು ನಿರ್ದೇಶಿಸಲಿದ್ದಾರೆ.
ಚಿತ್ರಕ್ಕೆ ಇನ್ನು ಹೆಸರನ್ನು ನಿಗದಿಪಡಿಸಿಲ್ಲ. ಈ ಸಿನಿಮಾ ರಜನಿಕಾಂತ್ ಅವರ 173ನೇ ಸಿನಿಮಾವಾಗಲಿದ್ದು, ತಲೈವಾ 173 ಎಂದು ಹೆಸರಿಡಲಾಗಿದೆ. ತಲೈವಾ 173 ಸಿನಿಮಾ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಕಂಪನಿ ಅಡಿ ನಿರ್ಮಾಣವಾಗಲಿದೆ. ಚಿತ್ರದ ನಿರ್ಮಾಣದಲ್ಲಿ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಕೈಜೋಡಿಸಿದ್ದಾರೆ. 2027ರ ಪೊಂಗಲ್ ಹಬ್ಬದ ಆಸುಪಾಸಿನಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಈ ಕುರಿತು ಕಮಲ್ ಹಾಸನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಒಮ್ಮೆ, ಸಣ್ಣ ಪಟ್ಟಣದ ಒಬ್ಬ ಹುಡುಗನಿಗೆ ಅವನ ನೆಚ್ಚಿನ ತಾರೆ ’ಸೂಪರ್ ಸ್ಟಾರ್’ ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಕನಸು ಇರುತ್ತದೆ. ಅದು ಅವನ ಸಿನಿಮಾ ಉತ್ಸಾಹವನ್ನು ಹೆಚ್ಚಿಸುತ್ತದೆ. ಅವನ ಕನಸು ಒಂದು ದಿನ ನನಸಾಯಿತು. ನಂತರ ಅವನಿಗೆ ತನ್ನ ಸೂಪರ್‌ಸ್ಟಾರ್ ಸಿನಿಮಾವನ್ನು ನಿರ್ದೇಶಿಸುವ ದೊಡ್ಡ ಕನಸಿತ್ತು. ಅವರು ಆ ಕನಸಿಗೆ ತುಂಬಾ ಹತ್ತಿರ ಬಂದರು. ಆದರೆ ಅದು ತಪ್ಪಿ ಹೋಯಿತು. ಇಂದು ಆ ದಿನ ಮತ್ತೆ ಬಂದಿದೆ’ ಎಂದು ಅವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.