ADVERTISEMENT

ರಜನಿಕಾಂತ್‌ಗೆ 70: ಪ್ರಧಾನಿ ಸೇರಿ ಹಲವರಿಂದ ಶುಭಾಶಯ

ಪಿಟಿಐ
Published 12 ಡಿಸೆಂಬರ್ 2020, 11:56 IST
Last Updated 12 ಡಿಸೆಂಬರ್ 2020, 11:56 IST
ರಜನಿಕಾಂತ್
ರಜನಿಕಾಂತ್   

ಚೆನ್ನೈ: ನಟ ರಜನಿಕಾಂತ್‌ ಶನಿವಾರ ತಮ್ಮ 70ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅಸಂಖ್ಯ ಅಭಿಮಾನಿಗಳು ಇಲ್ಲಿನ ಅವರ ನಿವಾಸದ ಬಳಿ ಸೇರಿದ್ದು ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾದರು.

ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಪ್ರಮುಖರು ಶುಭಾಶಯ ಕೋರಿದ್ದಾರೆ. ರಜನಿಕಾಂತ್ ನಿವಾಸದ ಬಳಿ ಸೇರಿದ್ದ ಅಭಿಮಾನಿಗಳು ನಟನ ಚಿತ್ರ ಒಳಗೊಂಡಿದ್ದ ಟೀ–ಶರ್ಟ್ ಧರಿಸಿದ್ದರು.‌

‘ಈಗಲ್ಲದಿದ್ದರೆ ಎಂದಿಗೂ ಇಲ್ಲ’ ಎಂಬ ಅರ್ಥದ ತಮಿಳು ಭಾಷೆಯ ಘೋಷಣೆಯೂ ಅದರಲ್ಲಿತ್ತು. ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಈಚೆಗಷ್ಟೇ ಘೋಷಿಸಿದ್ದ ಹಿನ್ನೆಲೆಯಲ್ಲಿ ಜನ್ಮದಿನ ಆಚರಣೆ ಗಮನಸೆಳೆಯಿತು.

ADVERTISEMENT

ಜನವರಿ ತಿಂಗಳಲ್ಲಿ ರಾಜಕೀಯ ಪಕ್ಷ ಸ್ಥಾಪನೆಯನ್ನು ಪ್ರಕಟಿಸುವುದಾಗಿ ರಜನಿಕಾಂತ್ ಇತ್ತೀಚೆಗೆ ಘೋಷಿಸಿದ್ದರು. ಈ ಮೂಲಕ ಅವರು ರಾಜಕೀಯ ಕ್ಷೇತ್ರ ಪ್ರವೇಶಿಸುವ ಕುರಿತು ಹಲವು ವರ್ಷಗಳಿಂದ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.