ADVERTISEMENT

'ರೌದ್ರಂ ರಣಂ ರುಧಿರಂ'ನಲ್ಲಿ ಸೊಂಟ ಬಳುಕಿಸಲಿದ್ದಾರೆ ರಕುಲ್‌‌ ಪ್ರೀತ್?

ಏಜೆನ್ಸೀಸ್
Published 29 ಮೇ 2020, 11:05 IST
Last Updated 29 ಮೇ 2020, 11:05 IST
ರಕುಲ್‌‌ ಪ್ರೀತ್ (ಇನ್‌ಸ್ಟಾಗ್ರಾಂ ಚಿತ್ರ)
ರಕುಲ್‌‌ ಪ್ರೀತ್ (ಇನ್‌ಸ್ಟಾಗ್ರಾಂ ಚಿತ್ರ)   

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(ರೌದ್ರಂ ರಣಂ ರುಧಿರಂ) ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿರುವುದು ಸಹಜ. ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ನಟಿಸಿರುವ ಈ ಬಿಗ್‌ ಬಜೆಟ್‌ ಸಿನಿಮಾದ ಶೂಟಿಂಗ್‌ ಮೇಲೆ ಕೊರೊನಾ ಭೀತಿ ತಟ್ಟಿದೆ. ಲಾಕ್‌ಡೌನ್‌ ಮುಗಿದ ಬಳಿಕ ಸಿನಿಮಾದ ಉಳಿದ ಭಾಗದ ಚಿತ್ರೀಕರಣ ನಡೆಸುವುದು ಚಿತ್ರತಂಡದ ಉದ್ದೇಶ. ಈ ನಡುವೆಯೇ ಇದರಲ್ಲಿ ನಟಿ ರಕುಲ್‌ ಪ್ರೀತ್‌ ಸಿಂಗ್ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

ರಕುಲ್‌ ಪ್ರೀತ್‌ ಸಿಂಗ್‌ ಪ್ರತಿಭಾನ್ವಿತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಆಕೆ ರಾಮ್‌ ಚರಣ್‌ ಜೊತೆಗೆ ತೆಲುಗಿನ ‘ಧ್ರುವ’ ಮತ್ತು ‘ಬ್ರೂಸ್‌ ಲೀಸ್‌’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿಯೇ, ಆರ್‌ಆರ್‌ಆರ್‌ನಲ್ಲಿ ಕುಣಿಯಲು ಆಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶಂಕರ್‌ ನಿರ್ದೇಶನದ ಕಮಲ ಹಾಸನ್‌ ನಟಿಸಿರುವ ತಮಿಳಿನ ‘ಇಂಡಿಯನ್‌ 2’ ಸಿನಿಮಾದಲ್ಲೂ ಆಕೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

‘ಆರ್‌ಆರ್‌ಆರ್‌’ನಲ್ಲಿ ಜೂನಿಯರ್‌ ಎನ್‌ಟಿಆರ್‌ ಕೋಮರಾಮ್‌ ಭೀಮನಾಗಿ ಕಾಣಿಸಿಕೊಂಡಿದ್ದಾರೆ. ರಾಮ್‌ ಚರಣ್‌ ಅವರದು ಅಲ್ಲುರಿ ಸೀತಾರಾಮರಾಜು ಪಾತ್ರ. ಡಿ.ವಿ.ವಿ. ದಾನಯ್ಯ ಬಂಡವಾಳ ಹೂಡಿರುವ ಇದರಲ್ಲಿ ಬಾಲಿವುಡ್‌ ನಟಿ ಅಲಿಯಾ ಭಟ್‌ ಮತ್ತು
ಒಲಿವಿಯಾ ಮೋರಿಸ್‌ ನಾಯಕಿಯರಾಗಿದ್ದಾರೆ. ಬಾಲಿವುಡ್‌ ನಟ ಅಜಯ್ ದೇವಗನ್‌ ಅವರೂ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.