ADVERTISEMENT

ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 6:31 IST
Last Updated 2 ಫೆಬ್ರುವರಿ 2026, 6:31 IST
<div class="paragraphs"><p>ನಟ ರಾಮ್ ಚರಣ್</p></div>

ನಟ ರಾಮ್ ಚರಣ್

   

ಎಕ್ಸ್‌ ಚಿತ್ರ

ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು (ಜ.31)ರಂದು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದರು. ಅದೇ ಖುಷಿಯಲ್ಲಿ ಆಸ್ಪತ್ರೆಗೆ ತೆರಳಿದ್ದಾಗ ನಟ ರಾಮ್ ಚರಣ್ ಹಾಗೂ ಮಗಳ ಮೇಲೆ ಅಭಿಮಾನಿಗಳು ಏಕಾಏಕಿ ಮುಗಿಬಿದ್ದಿದ್ದಾರೆ. ಆಗ ಆಸ್ಪತ್ರೆಯ ಒಳಗಡೆ ಹೋಗಲು ನಟ ರಾಮ್‌ ಚರಣ್‌ ಹರಸಾಹಸ ಪಟ್ಟಿದ್ದಾರೆ.

ADVERTISEMENT

ನಿನ್ನೆ (ಫೆ.1) ರಾಮ್ ಚರಣ್ ಅವರು ಪತ್ನಿ ಉಪಾಸನಾ ಕೊನಿಡೆಲಾ ಅವರನ್ನು ನೋಡಲು ಹೈದರಾಬಾದ್‌ನಲ್ಲಿರುವ ಅಪೊಲೊ ಆಸ್ಪತ್ರೆಗೆ ತೆರಳಿದ್ದರು. ಮಗಳೊಂದಿಗೆ ನಟ ರಾಮ್‌ ಚರಣ್‌ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಆಗ ಕಾರಿನಿಂದ ಇಳಿಯುತ್ತಿದ್ದಂತೆ ಏಕಾಏಕಿ ಅಭಿಮಾನಿಗಳು ನಟನನ್ನು ಸುತ್ತುವರೆದಿದ್ದಾರೆ.

ಅಲ್ಲದೇ ನಟ ಹಾಗೂ ಮಗಳು ಕ್ಲೀಂ ಕಾರಳ ಮೇಲೆ ಮುಗಿಬಿದ್ದಿದ್ದಾರೆ. ಅಧಿಕ ಜನಸಂದಣಿಯ ನಡುವೆ ಕೊನೆಗೂ ನಟ ಆಸ್ಪತ್ರೆ ಒಳಗೆ ಹೋದರು. ಆದರೆ ಇದೇ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅನೇಕರು ಮಗಳು ಕ್ಲೀಂ ಕಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.