ರಾಮ್ ಚರಣ್ ಕುಟುಂಬಸ್ಥರು
ಚಿತ್ರ: ಇನ್‌ಸ್ಟಾಗ್ರಾಂ
ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಸಂಭ್ರಮದಲ್ಲಿದ್ದಾರೆ. (ಜ.31)ರಂದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದರು. ಇದೀಗ ಆ ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
ಈ ಮೊದಲು ಹುಟ್ಟಿದ ಮಗಳಿಗೆ ಕ್ಲಿನ್ಕಾರ ಎಂದು ಹೆಸರಿಟ್ಟಿದ್ದರು. ಈ ಬಾರಿ ಜನಿಸಿದ ಅವಳಿ ಮಕ್ಕಳಿಗೂ ಇವರು ವಿಭಿನ್ನ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಮಾಹಿತಿ ನೀಡಿದ್ದಾರೆ.
ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಅವರ ಮಗನಿಗೆ ‘ಶಿವರಾಮ್’ ಎಂದು. ಮಗಳಿಗೆ ‘ಅನ್ವೀರಾ ದೇವಿ’ ಎಂದು ಇಡಲಾಗಿದೆ. ‘ಶಿವ’ ಎಂಬುವುದು ಶಿವ ಶಂಕರ ವರ ಪ್ರಸಾದ್ ಅವರಿಂದ ಪ್ರೇರಿತವಾಗಿದೆ. ಇದು ಆಂತರಿಕ ಶಕ್ತಿ, ಆಧ್ಯಾತ್ಮಿಕ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ರಾಮ್ ಎಂಬುವುದು ಕರುಣೆ ಮತ್ತು ಧೈರ್ಯವನ್ನು ಸಾಕಾರಗೊಳಿಸುತ್ತದೆ. ಈ ಹೆಸರು ಆಂತರಿಕ ಶಕ್ತಿ ಮತ್ತು ಜವಾಬ್ದಾರಿಯುತ ಕ್ರಿಯೆಯ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ.
ಇನ್ನು, ‘ಅನ್ವೀರಾ ದೇವಿ’ ಎಂದರೆ ದೈವಿಕ ಸ್ತ್ರೀತ್ವದ ಅಪರೂಪದ ಮತ್ತು ಶಕ್ತಿಯುತ ಅಭಿವ್ಯಕ್ತಿ ಇದೆ. ಈ ಹೆಸರು ಕನಕ ದುರ್ಗಾ ದೇವಿಯ ಆಶೀರ್ವಾದದಿಂದ ಪ್ರೇರಿತವಾಗಿದೆ. ಇದು ದೈವಿಕ ರಕ್ಷಣೆ, ಅನುಗ್ರಹ, ಧೈರ್ಯ ಮತ್ತು ಅಚಲ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ನಟ ಅವಳಿ ಮಕ್ಕಳ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.