
ಗೀತಾ ಶಿವರಾಜ್ ಕುಮಾರ್, ನಟಿ ರಮ್ಯಾ, ಶಿವಣ್ಣ
ಚಿತ್ರ: ಇನ್‌ಸ್ಟಾಗ್ರಾಮ್
ಚಂದನವನದ ನಟಿ ರಮ್ಯಾ ಅವರು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ.
ದುಬೈನಲ್ಲಿ ನಡೆದ ಕನ್ನಡಿಗರ ಕೂಟ, ಗಲ್ಫ್ ಕನ್ನಡ ಮೂವೀಸ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ದಂಪತಿ ಹಾಗೂ ನಟಿ ರಮ್ಯಾ ಅವರು ಭಾಗಿಯಾಗಿದ್ದಾರೆ.
ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಜೊತೆಗೆ ಕಳೆದ ಸುಂದರ ಫೋಟೊಗಳನ್ನು ನಟಿ ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್ ಜೊತೆಗೆ ‘ಕಣ್ಮಣಿಯ ದುಬೈ. ಶಿವಣ್ಣ ಮತ್ತು ಗೀತಕ್ಕ ಜೊತೆ ಕಳೆದ ಕ್ಷಣಗಳೇ ನನ್ನ ಅತ್ಯುತ್ತಮ ಕ್ಷಣಗಳು. ಅವರ ಪ್ರೀತಿ, ಸರಳತೆ ಮತ್ತು ಹಾಸ್ಯಪ್ರಜ್ಞೆ ನನ್ನ ಪ್ರವಾಸವನ್ನು ನಿಜವಾಗಿಯೂ ಸ್ಮರಣೀಯವಾಗಿಸಿತು. ನನ್ನ ನೆಚ್ಚಿನ ದಂಪತಿಗಳಿಗೆ ಗೌರವ ಸಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಹಂಚಿಕೊಂಡ ಪೋಸ್ಟ್‌ನಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ.
ಮತ್ತೊಂದು ಚಿತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರೊಟ್ಟಿಗೆ ನಟಿ ರಮ್ಯಾ ಖುಷಿಯಿಂದ ಮಾತನಾಡುತ್ತಿರುವುದನ್ನು ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.