ADVERTISEMENT

ರಣಬೀರ್‌ ಕಪೂರ್‌, ಆಲಿಯಾ ಭಟ್‌ ಮದುವೆ ವದಂತಿ: ವಿವಾಹ ಸದ್ಯಕ್ಕಿಲ್ಲ ಎಂದ ನಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 6:55 IST
Last Updated 23 ಫೆಬ್ರುವರಿ 2022, 6:55 IST
ರಣಬೀರ್‌, ಆಲಿಯಾ
ರಣಬೀರ್‌, ಆಲಿಯಾ   

ಮುಂಬೈ: ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಮದುವೆ ಕುರಿತಾದ ಗಾಳಿ ಸುದ್ದಿಗಳ ಬಗ್ಗೆ ಮೌನ ಮುರಿದಿರುವ ಆಲಿಯಾ ಭಟ್‌ ಸದ್ಯ ಮದುವೆ ಇಲ್ಲ ಎಂದು ಹೇಳಿದ್ದಾರೆ.

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ಆಲಿಯಾ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮದುವೆ ಸದ್ಯಕಿಲ್ಲ ಎಂದು ಹೇಳಿದ್ದಾರೆ.

ರಣಬೀರ್‌, ಆಲಿಯಾ ಲವ್‌ ಮಾಡುತ್ತಿರುವುದುಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಣಬೀರ್‌ ಹಾಗೂ ಆಲಿಯಾ ಕುಟುಂಬದವರು ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಗಾಸಿಪ್‌ಗಳು ಹರಡಿದ್ದವು.

ADVERTISEMENT

‘ಬಾಲಿವುಡ್​ ಬಬಲ್​’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ತುಂಬಾ ಜನ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಮ್ಮ ಬಗ್ಗೆಯೂ ಗಾಳಿ ಸುದ್ದಿ ಹರಡಿರಬಹುದು. ಸದ್ಯಕ್ಕೆ ಮದುವೆ ಇಲ್ಲ, ನಮಗೆ ಕಂಪರ್ಟ್‌ ಎನಿಸುವಂತಹ ಸಮಯ ಬಂದಾಗ ಮದುವೆ ಆಗುತ್ತೇವೆ ಎಂದಿದ್ದಾರೆ.

ನಾನು ಕಂಡು ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ ಎಂದು ಆಲಿಯಾ ಹೇಳಿದ್ದಾರೆ.

ಆಲಿಯಾ ಭಟ್‌'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿಸಿದ್ದು ಚಿತ್ರವು ಫೆಬ್ರುವರಿ 25ರಂದು ತೆರೆಗೆ ಬರಲಿದೆ.

ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ'ಗಂಗೂಬಾಯಿ ಕಾಠಿಯಾವಾಡಿ' ಚಿತ್ರವನ್ನು ತಯಾರಿಸಲಾಗಿದೆ.

ಈ ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.