ADVERTISEMENT

ಬಿಡುಗಡೆಯಾದ ಮೊದಲ ದಿನ ರಣಬೀರ್ ಸಿನಿಮಾ ಶಂಶೇರಾ ಗಳಿಸಿದ್ದೆಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2022, 5:49 IST
Last Updated 25 ಜುಲೈ 2022, 5:49 IST
ರಣಬೀರ್ ಕಪೂರ್
ರಣಬೀರ್ ಕಪೂರ್   

ಬೆಂಗಳೂರು: ಬಾಲಿವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ ರಣಬೀರ್ ಕಪೂರ್ ಅವರ ಹೊಸ ಸಿನಿಮಾ ‘ಶಂಶೇರಾ‘ ಬಿಡುಗಡೆಯಾದ ಮೊದಲ ದಿನ ₹10.25 ಕೋಟಿ ಗಳಿಕೆ ಕಂಡಿದೆ.

ಈ ಮೂಲಕ ಚಿತ್ರದ ಮೊದಲ ದಿನದ ಗಳಿಕೆ ಸಾಧಾರಣ ಮೊತ್ತವಾಗಿದೆ ಎಂದು ಬಾಲಿವುಡ್ ಉದ್ಯಮ ವಲಯ ವಿಶ್ಲೇಷಿಸಿದೆ.

ರಣಬೀರ್ ಕಪೂರ್ ಮತ್ತು ವಾಣಿ ಕಪೂರ್ ಹಾಗೂ ಸಂಜಯ್ ದತ್ ನಟಿಸಿರುವ ಚಿತ್ರ ಶಂಶೇರಾ, ಅಂದಾಜು ₹150 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ.

ADVERTISEMENT

ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅಗ್ನಿಪಥ್ ಖ್ಯಾತಿಯ ಕರಣ್ ಮಲ್ಹೋತ್ರಾ ನಿರ್ದೇಶನವಿದೆ.

ಶಂಶೇರಾ ಚಿತ್ರದಲ್ಲಿ ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಆಕರ್ಷಕ ಮೈಕಟ್ಟು ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.