ADVERTISEMENT

‘ಸನ್‌ ಕಿಸ್‌‘ ಫೋಟೊ ಹಂಚಿಕೊಂಡ ಆಲಿಯಾ, ಅನುಷ್ಕಾ!

ರಣಬೀರ್‌, ಕೊಹ್ಲಿ ಯಾರು ಒಳ್ಳೆಯ ಫೋಟೊಗ್ರಾಫರ್?

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 10:55 IST
Last Updated 12 ಜೂನ್ 2020, 10:55 IST
ಆಲಿಯಾ, ಅನುಷ್ಕಾ
ಆಲಿಯಾ, ಅನುಷ್ಕಾ   

ಹೊರಗೆ ಓಡಾಡಿಕೊಂಡು, ಕಾಡು ನದಿ ಅಂತ ಪ್ರಕೃತಿ ಸೌಂದರ್ಯ ಸವಿಯಲು ಸಾಧ್ಯವಾಗದೇ ಲಾಕ್‌ಡೌನ್‌ ಕಾರಣದಿಂದಾಗಿ ಕೈಕಾಲು ಕಟ್ಟಿದಂತೆ ಕೂತಿರುವ ಬಾಲಿವುಡ್‌ ಮಂದಿ, ತಮ್ಮ ಬಾಲ್ಕನಿಯಲ್ಲೇ ಸೂರ್ಯೋದಯ ನೋಡಿ ರೋಮಾಂಚನಗೊಳ್ಳುತ್ತಿದ್ದಾರೆ.

ಈ ಸೂರ್ಯೋದಯದ ಸವಿಯನ್ನು ‘ಸನ್‌ ಕಿಸ್‌‘ ಎಂದೇ ಬಣ್ಣಿಸುವ ಬಾಲಿವುಡ್‌ ಮುಂದೆ, ತಮ್ಮ ’ಸನ್‌ ಕಿಸ್‌‘ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೇಕಪ್ ಇಲ್ಲದೆ, ಮನೆಯಲ್ಲೇ ವರ್ಕೌಟ್‌ ಮಾಡಿಕೊಂಡು ಸೌಂದರ್ಯ ಕಾಪಾಡಿಕೊಳ್ಳುತ್ತಾ, ಹೊಳೆಯುವ ಮುಖವನ್ನು ತೋರಿದವರಲ್ಲಿ ಅನುಷ್ಕಾ ಹಾಗೂ ಆಲಿಯಾ ಮೊದಲಿಗರು.

ಮನೆಯ ಬಾಲ್ಕನಿಯಲ್ಲಿ ಕೂತು, ಹೊಳೆಯುವ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕೂತ ಆಲಿಯಾ ಭಟ್‌ ಫೋಟೊವನ್ನು ಗೆಳೆಯ ರಣಬೀರ್‌ ಕಪೂರ್‌ ಕ್ಲಿಕ್‌ ಮಾಡಿದ್ದಾರೆ. ಹಾಗೇ ಸೂರ್ಯೋದಯದ ಖುಷಿಯಲ್ಲಿ ಕೂದಲು ಹಾರಾಡಿಸಿಕೊಂಡು ನಗುತ್ತಿರುವ ಅನುಷ್ಕಾ ಅವರ ಫೋಟೊವನ್ನು ಪತಿ ವಿರಾಟ್‌ ಕೊಹ್ಲಿ ಸೆರೆಹಿಡಿದ್ದಾರೆ.

ADVERTISEMENT

ಇವರಿಬ್ಬರ ಅಭಿಮಾನಿಗಳು ಈ ಎರಡೂ ಫೋಟೊಗಳನ್ನು ಇಟ್ಟುಕೊಂಡು, ರಣಬೀರ್‌ ಹಾಗೂ ಕೊಹ್ಲಿ ನಡುವೆ ಯಾರು ಒಳ್ಳೆಯ ಫೋಟೊಗ್ರಾಫರ್‌ ವೋಟ್‌ ಮಾಡಿ ಎಂದು ಟ್ರೆಂಡ್‌ ಮಾಡುತ್ತಿದ್ದಾರೆ. ಆಲಿಯಾ ಹಾಗೂ ಅನುಷ್ಕಾ ಮುದ್ದಾದ ಮುಖಗಳಿಂದ ಈ ಫೋಟೊಗಳು ಮತ್ತಷ್ಟು ವೈರಲ್ ಆಗಿವೆ. ಅಭಿಮಾನಿಗಳು ಇನ್‌ಸ್ಟಾ ಪೂಲ್‌ ಕ್ರಿಯೇಟ್‌ ಮಾಡಿ ಮತಹಾಕುವಂತೆ ಕೋರುತ್ತಿದ್ದಾರೆ.

ಆಲಿಯಾ ’ರಣಬೀರ್‌ ನನ್ನ ಫೇವ್ರೆಟ್‌ ಫೋಟೊಗ್ರಾಫರ್‌‘ ಎಂದಿದ್ದಾರೆ. ಅನುಷ್ಕಾ ಎಲ್ಲೇ ಹೋದರೂ ಪತಿ ವಿರಾಟ್‌ ಕೋಹ್ಲಿನೇ ಫೋಟೊಗ್ರಾಫರ್ ಎಂದು ಬರೆದುಕೊಂಡಿದ್ದಾರೆ‌. ಇವರಿಬ್ಬರ ಅಭಿಮಾನಿಗಳು ಮಾತ್ರ ಯಾರು ಬೆಸ್ಟ್‌ ಫೋಟೊಗ್ರಾಫರ್‌ ಎಂದು ಘೋಷಿಸುವ ಉಮೇದಿನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.