ADVERTISEMENT

ಅಪ್ಪನ ನೆನೆದು ಭಾವುಕರಾದ ನಟ ರಣಬೀರ್‌ ಕಪೂರ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 12:32 IST
Last Updated 16 ಡಿಸೆಂಬರ್ 2021, 12:32 IST
ರಿಷಿ ಕಪೂರ್‌ ಮತ್ತು ರಣಬೀರ್‌ ಕಪೂರ್‌
ರಿಷಿ ಕಪೂರ್‌ ಮತ್ತು ರಣಬೀರ್‌ ಕಪೂರ್‌   

ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಯಕ ನಟ ರಣಬೀರ್‌ ಕಪೂರ್‌ ತಂದೆ ರಿಷಿ ಕಪೂರ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಬುಧವಾರ ನಡೆದ ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡುತ್ತ ತಂದೆ ರಿಷಿ ಕಪೂರ್‌ ಅವರನ್ನು ನೆನೆದು ಭಾವುಕರಾದರು.

ತಂದೆಯವರು ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ ಹಾಗೂ ಈ ಚಿತ್ರದ ನಿರ್ದೇಶಕ ಆಯಾನ್‌ ಮುಖರ್ಜಿ ಬಗ್ಗೆಯೂ ಕೇಳುತ್ತಿದ್ದರು. ಆದರೆ ಅವರು ಬ್ರಹ್ಮಾಸ್ತ್ರ ನೋಡಲು ಇಲ್ಲ ಎಂದು ಭಾವುಕರಾದರು.

ADVERTISEMENT

ರಣಬೀರ್‌ ಜೊತೆ ಆಲಿಯಾ ಭಟ್‌ ಕೂಡ ಪೋಸ್ಟರ್‌ ಬಿಡುಗಡೆ ಸಮಾರಂಭದಲ್ಲಿಭಾಗವಹಿಸಿದ್ದರು. ಬಾಲಿವುಡ್‌ನ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿರುವ ರಣಬೀರ್‌ ಮತ್ತು ಆಲಿಯಾ ಬ್ರಹ್ಮಾಸ್ತ ಸಿನಿಮಾದದಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.

2022ರಲ್ಲಿ ಅವರು ಮದುವೆಯಾಗುತ್ತಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.