ADVERTISEMENT

ರಂಗೀಲಾಗೆ 30 ವರ್ಷ | ಅದೊಂದು ಚಿತ್ರವಷ್ಟೇ ಅಲ್ಲ, ನವರಸಗಳ ಅನುಭವ: ನಟಿ ಊರ್ಮಿಳಾ

ಪಿಟಿಐ
Published 8 ಸೆಪ್ಟೆಂಬರ್ 2025, 11:54 IST
Last Updated 8 ಸೆಪ್ಟೆಂಬರ್ 2025, 11:54 IST
<div class="paragraphs"><p>ಊರ್ಮಿಳಾ ಮಾತೋಂಡ್ಕರ್</p></div>

ಊರ್ಮಿಳಾ ಮಾತೋಂಡ್ಕರ್

   

ಇನ್‌ಸ್ಟಾಗ್ರಾಂ ಚಿತ್ರ

ನವದೆಹಲಿ: 90ರ ದಶಕದ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ ರಂಗೀಲಾ ಚಿತ್ರಕ್ಕೆ 30 ವರ್ಷಗಳ ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸಂತಸ ಹಂಚಿಕೊಂಡಿದ್ದಾರೆ. 

ADVERTISEMENT

ಚಿತ್ರಕ್ಕೆ ಮೂವತ್ತು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ‘ರಂಗೀಲಾ ರೇ..’ ಗೀತೆಯ ತುಣಕನ್ನು 51 ವರ್ಷದ ಊರ್ಮಿಳಾ ಹಂಚಿಕೊಂಡಿದ್ದಾರೆ. ರಾಮ್‌ ಗೋಪಾಲ್ ವರ್ಮಾ ಅವರ ನಿರ್ದೇಶನದ ಈ ಚಿತ್ರವು 1995ರ ಸೆ. 8ರಂದು ತೆರೆಕಂಡಿತ್ತು. ಆಮೀರ್ ಖಾನ್ ಮತ್ತು ಊರ್ಮಿಳಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ರಂಗೀಲಾ ಹಿಟ್ ಚಿತ್ರ ಆಗುವುದರ ಜತೆಗೆ, ಆ ವರ್ಷ ಭಾರತದಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡ ನಾಲ್ಕನೇ ಚಿತ್ರವಾಗಿತ್ತು. ಚಿತ್ರಕ್ಕೆ ಎ.ಆರ್. ರೆಹಮಾನ್ ಅವರ ಸಂಗೀತ ಹೊಸ ಅಲೆಯನ್ನು ಸೃಷ್ಟಿಸಿತ್ತು. ತನ್ಹಾ... ತನ್ಹಾ..., ಹೇ ರಾಮಾ..., ಮಂಗ್ತಾ ಹೆ ಕ್ಯಾ..., ಪ್ಯಾರ್‌ ಯೇ ಜಾನೆ ಕೈಸಾ...’  ಗೀತೆಗಳು ಚಿತ್ರಕ್ಕೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದವು.

‘ಅದು ಕೇವಲ ಚಿತ್ರವಷ್ಟೇ ಆಗಿರಲಿಲ್ಲ. ಅದು ಸಂಭ್ರಮ, ಭರವಸೆ, ಕನಸು, ಮಹ್ವಾಕಾಂಕ್ಷೆ, ಸೌಂದರ್ಯ, ಉತ್ಸಾಹ, ವಾತ್ಸಲ್ಯ, ಮೆಚ್ಚುಗೆ, ಪ್ರೀತಿ, ಬಯಕೆ, ಹೋರಾಟ, ಜಯ ಮತ್ತು ತ್ಯಾಗವನ್ನು ಒಳಗೊಂಡ ಭಾವನಾತ್ಮಕ ಅನುಭವವಾಗಿತ್ತು. ನನ್ನ ಬದುಕಿನ ಅತಿ ದೊಡ್ಡ ಸಂಭ್ರಮ ಅದಾಗಿತ್ತು’ ಎಂದು ಊರ್ಮಿಳಾ ಬರೆದುಕೊಂಡಿದ್ದಾರೆ.

‘ಚಿತ್ರದ ಪ್ರತಿ ದೃಶ್ಯ ನೋಡಿದರೆ ಈಗಲೂ ಮಗುವಿನ ನಗುವನ್ನು ತರಿಸುತ್ತದೆ. ಮುಗ್ದತೆ ಮತ್ತು ವಿಸ್ಮಯದ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತದೆ. ಭಾರತೀಯ ಸಾಹಿತ್ಯ ಮತ್ತು ಕಾವ್ಯದ ನವರಸಗಳನ್ನೂ ಅದು ಉಣಬಡಿಸಿದೆ. ಮುಗ್ಧ ಯುವತಿಯೊಬ್ಬಳು ಬೆಳ್ಳಿ ತೆರೆಗೆ ಪ್ರವೇಶಿಸುವ ಮತ್ತು ಅವರ ಹೊಳಪು ಮತ್ತು ಪರಿಶುದ್ಧತೆ ಹಲವು ಹೃದಯಗಳನ್ನು ಗೆಲ್ಲುತ್ತದೆ. ಕಾವ್ಯ, ಸೌಂದರ್ಯ, ಬದುಕು ಮತ್ತು ಪ್ರೀತಿಯ ಕೊನೆಯಿಲ್ಲದ ಬದುಕಿನೆಡೆಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ’ ಎಂದು ಅವರು ಹೇಳಿದ್ದಾರೆ.

‘30 ವರ್ಷಗಳ ಹಿಂದೆ ‘ರಂಗೀಲಾ’ ಎಂಬುದು ಪ್ರತಿಯೊಬ್ಬರ ಬದುಕಿನ ಭಾಗವಾಗಿತ್ತು. ಅದು ಇಂದೂ ಹಾಗೇ ಇದೆ ಎಂಬುದು ನನ್ನ ಭಾವನೆ. ಆ ಚಿತ್ರದ ಮೂಲಕ ನಿಮ್ಮ ಬದುಕಿನಲ್ಲಿ ನನಗೊಂದು ಸ್ಥಾನ ಕಲ್ಪಿಸಿದ್ದಕ್ಕೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಂದು ನೀವು ತೋರಿಸಿದ ಆ ಪ್ರೀತಿಯೇ ನನ್ನ ಬದುಕಿಗೆ ಆಶೀರ್ವಾದ ಆದವು’ ಎಂದು ಊರ್ಮಿಳಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಜನಪ್ರಿಯ ನಟಿಯಾಗಬೇಕೆಂಬ ಕನಸು ಕಂಡ ಮಿಲಿ ಎಂಬ ಪಾತ್ರದಲ್ಲಿ ಊರ್ಮಿಳಾ ಮಾತೋಂಡ್ಕರ್ ರಂಗೀಲಾದಲ್ಲಿ ಅಭಿನಯಿಸಿದ್ದಾರೆ. ರಾಜ್‌ ಕಮಲ್‌ (ಜಾಕಿ ಶ್ರಾಫ್‌) ಎಂಬ ಶ್ರೀಮಂತ ಮತ್ತು ಮುನ್ನಾ (ಆಮೀರ್ ಖಾನ್) ಎಂಬ ಬಾಲ್ಯದ ಗೆಳೆಯ ಇಬ್ಬರೂ ಮಿಲಿಯನ್ನು ಪ್ರೀತಿಸುತ್ತಾರೆ. ಅದು ಚಿತ್ರಕ್ಕೆ ಬುದೊಡ್ಡ ತಿರುವು ನೀಡುತ್ತದೆ. ಕುತೂಹಲದಲ್ಲಿ ಸಾಗುವ ಚಿತ್ರ ಇದಾದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.