
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ದಿನೇ ದಿನೇ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. 10 ದಿನದಲ್ಲಿ ₹ 300 ಕೋಟಿಗೂ ಅಧಿಕ ಗಳಿಕೆ ಮಾಡಿದ್ದ ‘ಧುರಂಧರ್‘. ಸೋಮವಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ₹550 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಧುರಂಧರ್’ ಚಿತ್ರವು 10 ದಿನದಲ್ಲಿ ₹364.60 ಕೋಟಿ ಗಳಿಸಿಕೊಂಡಿತ್ತು. ನಿನ್ನೆ(ಸೋಮವಾರ) ಭಾರತದಲ್ಲಿ ₹430.20 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ₹122.50 ಕೋಟಿ ಸೇರಿ, ವಿಶ್ವದಾದ್ಯಂತ ಒಟ್ಟು ₹550 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
‘ಧುರಂಧರ್’ ಚಿತ್ರವು ಎರಡನೇ ಶುಕ್ರವಾರ, ಎರಡನೇ ಶನಿವಾರ ಮತ್ತು ಎರಡನೇ ಭಾನುವಾರದ ಗಳಿಕೆಯು ಹಿಂದಿ ಸಿನಿಮಾ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನು ಸೃಷ್ಠಿಸಿದೆ ಎಂದು ಚಿತ್ರತಂಡ ಹೇಳಿದೆ.
ಗೂಢಚಾರಿ ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದರೆ, ಆರ್. ಮಾಧವನ್ ಅವರು ಅಜಯ್ ಸನ್ಯಾಲ್ ಪಾತ್ರಧಾರಿಯಾಗಿ ಎಸ್‌ಪಿ ಚೌಧರಿ ಅಸ್ಲಾಂ ಅವರ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.