ADVERTISEMENT

ಅಪರೂಪದ ವಿಡಿಯೊ ನೋಡಿ: ಸಹೋದರರ ಜೊತೆ ಹೆಜ್ಜೆ ಹಾಕಿದ ಸಲ್ಮಾನ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 7:32 IST
Last Updated 28 ಜೂನ್ 2021, 7:32 IST
ಸಹೋದರರ ಜೊತೆ ಹೆಜ್ಜೆ ಹಾಕಿರುವ ಸಲ್ಲು ಬಾಯ್‌
ಸಹೋದರರ ಜೊತೆ ಹೆಜ್ಜೆ ಹಾಕಿರುವ ಸಲ್ಲು ಬಾಯ್‌   

ಬಾಲಿವುಡ್‌ನ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಈ ಲಾಕ್‌ಡೌನ್‌ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದದ್ದು ಎಲ್ಲರಿಗೂ ತಿಳಿದೇ ಇದೆ. ಹಳೆಯ ಫೋಟೊಗಳು, ವಿಡಿಯೊಗಳನ್ನು ಮತ್ತೆ ಪೋಸ್ಟ್‌ ಮಾಡುವ ಮೂಲಕ ಸಲ್ಲು ಬಾಯ್‌, ನೆನಪುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ವಿಶೇಷ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿಸಹೋದರರ ಜೊತೆ ಹೆಜ್ಜೆ ಹಾಕಿರುವ ಅಪರೂಪದ ವಿಡಿಯೊವನ್ನು ಸಲ್ಲು ಬಾಯ್‌ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

2018ರಲ್ಲಿ ಸಲ್ಮಾನ್‌ ಖಾನ್‌ ಅವರು, ಸೊಹೈಲ್‌ ಹಾಗೂ ಅರ್ಬಾಜ್‌ ಖಾನ್‌ ಜೊತೆ ಕ್ರಿಸ್‌ಮಸ್‌ ಪಾರ್ಟಿಯೊಂದರಲ್ಲಿ ಹೆಜ್ಜೆ ಹಾಕಿರುವ ವಿಡಿಯೊ ಆದಾಗಿದೆ. ಆ ಪ್ಯಾಮಿಲಿ ಟೈಮ್‌ ವಿಡಿಯೊ ಸಲ್ಲು ಅಭಿಮಾನಿಗಳಿಗಂತೂ ಸಖತ್‌ ಖುಷಿಕೊಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.