ADVERTISEMENT

ನಿಜ ಜೀವನ ಮಾತ್ರವಲ್ಲ, ಸಿನಿಮಾಗಳಲ್ಲೂ ಜೋಡಿಯಾಗಿ ನಟಿಸಿದ್ದಾರೆ ರಶ್ಮಿಕಾ–ವಿಜಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 10:56 IST
Last Updated 23 ಫೆಬ್ರುವರಿ 2026, 10:56 IST
   

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹವಾಗುತ್ತಿರುವುದಾಗಿ ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿ ಫೆಬ್ರುವರಿ 26ರಂದು ಹಸೆಮಣೆ ಏರಲಿದ್ದಾರೆ. ಆದರೆ ರಶ್ಮಿಕಾ ಅವರು ಅಧಿಕೃತವಾಗಿ ಮದುವೆ ದಿನಾಂಕ ತಿಳಿಸಿಲ್ಲ. 

ವಿಜಯ್ ದೇವೆಕೊಂಡ ಹಾಗೂ ರಶ್ಮಿಕಾ ಜೋಡಿ ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹಾಗಾದರೆ ಈವರೆಗೆ ಈ ಜೋಡಿ ಒಟ್ಟಾಗಿ ನಟಿಸಿರುವ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ.

ಗೀತಾ ಗೋವಿಂದಂ (2018)

ADVERTISEMENT

ಗೀತಾ ಗೋವಿಂದಂ

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಜೋಡಿಯ ಮೊದಲ ಸಿನಿಮಾ ‘ಗೀತಾ ಗೋವಿಂದಂ’ ಆಗಿದೆ. ತೆಲುಗಿನ ರೋಮ್ಯಾಂಟಿಕ್ ಹಾಸ್ಯ ಸಿನಿಮಾವಾದ ಗೀತಾ ಗೋವಿಂದಂ ಅನ್ನು ಪರಶುರಾಮ್ ನಿರ್ದೇಶಿಸಿದ್ದಾರೆ. ಈ ಸಿನಿಮಾ 2018 ಸಿನಿಮಾ ತೆರೆಕಂಡಿತ್ತು. ₹5ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ₹150 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾಗೆ ಅನಂತ ಶ್ರೀರಾಮ್ ಮತ್ತು ಶ್ರೀ ಮಣಿ ಸಂಗೀತ ನೀಡಿದ್ದಾರೆ.

ಡಿಯರ್ ಕಾಮ್ರಡ್ (2019)

ಡಿಯರ್ ಕಾಮ್ರಡ್

ಇವರಿಬ್ಬರ ಜೋಡಿಯಲ್ಲಿ ಮೂಡಿಬಂದ ಎರಡನೇಯ ಸಿನಿಮಾ ಡಿಯರ್ ಕಾಮ್ರಡ್ . ತೆಲುಗಿನ ಆಕ್ಷನ್‌ ಸಿನಿಮಾ ಇದಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಬಿಗ್ ಬೆನ್ ಸಿನಿಮಾಸ್ ಒಟ್ಟಾಗಿ ನಿರ್ಮಿಸಿವೆ. ಭರತ್ ಕಮ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರ ₹37.33 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಸಿನಿಮಾ ಮೂಲಕ ಮಲಯಾಳಂನ ನಟಿ ಶ್ರುತಿ ರಾಮಚಂದ್ರನ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ರಣಬಾಲಿ 

ರಣಬಾಲಿ

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರಡ್'ನಲ್ಲಿ ವಿಜಯ್ ಜೊತೆ ರಶ್ಮಿಕಾ ನಟಿಸಿದ್ದರು. ಈಗ 'ರಣಬಾಲಿ'ಯಲ್ಲಿ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಕಾಣಸಿಕೊಳ್ಳಲಿದ್ದಾರೆ. ವಿಜಯ್ ಅವರ 14ನೇ ಸಿನಿಮಾ ಇದಾಗಿದ್ದು, ಸಿನಿಮಾಗೆ ರಾಹುಲ್ ಸಂಕ್ರಿತ್ಯಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 11ರಂದು 'ರಣಬಾಲಿ' ಸಿನಿಮಾ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.