ADVERTISEMENT

ನಗುತ್ತಲೇ ಜೊತೆಯಾಗಿರಿ; ವಿಜಯ್–ರಶ್ಮಿಕಾಗೆ ಶುಭಕೋರಿದ ಸಹೋದರ ಆನಂದ್ ದೇವರಕೊಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 7:20 IST
Last Updated 27 ಫೆಬ್ರುವರಿ 2026, 7:20 IST
<div class="paragraphs"><p>ರಶ್ಮಿಕಾ ಮತ್ತು ನಟ ವಿಜಯ್, ಸಹೋದರ&nbsp;ಆನಂದ್  ದೇವರಕೊಂಡ</p></div>

ರಶ್ಮಿಕಾ ಮತ್ತು ನಟ ವಿಜಯ್, ಸಹೋದರ ಆನಂದ್ ದೇವರಕೊಂಡ

   

ಚಿತ್ರ: ಇನ್‌ಸ್ಟಾಗ್ರಾಂ

ಕೊನೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ದಂಪತಿಗಳಾಗಿದ್ದಾರೆ. ನಿನ್ನೆ (ಫೆ.26) ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್​​ನಲ್ಲಿ ಶುಭ ಮುಹೂರ್ತದಲ್ಲಿ ಈ ಜೋಡಿ ತಮ್ಮ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಂಧು ಮಿತ್ರರು ಮಾತ್ರ ಭಾಗಿಯಾಗಿದ್ದರು.

ADVERTISEMENT

ಇದೀಗ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ದೇವರಕೊಂಡ ಕುಟುಂಬದ ಸೊಸೆಯಾಗಿದ್ದಾರೆ. ಮದುವೆ ಬೆನ್ನಲ್ಲೆ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಅತ್ತಿಗೆ ರಶ್ಮಿಕಾ ಬಗ್ಗೆ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ವಿಜಯ್ ಮತ್ತು ರಶ್ಮಿಕಾರನ್ನು ತಬ್ಬಿಕೊಂಡು ಫೋಟೊಗೆ ಪೋಸ್‌ ಕೊಟ್ಟಿರುವ ಆನಂದ್, ‘ನಾನು ಹೋದಲ್ಲೆಲ್ಲ ಹಲವು ಭಾರಿ ಅಭಿಮಾನಿಗಳು ಅತ್ತಿಗೆ ಹೇಗಿದ್ದಾರೆ, ರಶ್ಮಿಕಾ ಎಂದು ಕೂಗುತ್ತಿದ್ದರು. ಆಗ ಅವರಿಗೆಲ್ಲ ನಾನು ಹೇಗೆ ಉತ್ತರ ನೀಡಬೇಕೆಂದು ಗೊತ್ತಾಗುತ್ತಿರಲಿಲ್ಲ. ಇಂದು ನನ್ನ ಅಣ್ಣ ಮದುವೆಯಾಗಿದ್ದಾನೆ. ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಅತ್ತಿಗೆಯಾಗಿ ನಾನು ಪಡೆದುಕೊಂಡಿದ್ದೇನೆ. ನೀವಿಬ್ಬರು ಜೀವನ ಪರ್ಯಂತ ನಗುತ್ತಲೇ ಜೊತೆಯಾಗಿರಬೇಕು’ ಎಂದು ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.