ADVERTISEMENT

ವಿಡಿಯೊ | ರಶ್ಮಿಕಾ ಮಂದಣ್ಣ ಸ್ಟಂಟ್‌ಗೆ ಅಭಿಮಾನಿಗಳ ಎದೆಯಲ್ಲಿ ಕಂಪನ!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 6:37 IST
Last Updated 15 ನವೆಂಬರ್ 2019, 6:37 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ಬೆಂಗಳೂರು: ತೆಲುಗು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ತೆಲುಗಿನಲ್ಲಿ ಮಹೇಶ್‌ ಬಾಬು ನಾಯಕನಾಗಿ ಅಭಿನಯಿಸುತ್ತಿರುವ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.

ಈ ನಡುವೆ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಾಕುತ್ತಿದ್ದಾರೆ.ಈ ವಿಡಿಯೊಗಳು ವೈರಲ್‌ ಆಗಿದ್ದು ರಶ್ಮಿಕಾ ಸ್ಟಂಟ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ನಿತಿನ್‌ ಹಾಗೂ ಅಲ್ಲು ಅರ್ಜುನ್‌ ಅಭಿನಯದ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ನಿತಿನ್‌ ಜೊತೆ ಭೀಷ್ಮ,ಅಲ್ಲು ಅರ್ಜುನ್‌ಗೆ ನಾಯಕಿಯಾಗಿ 'ಎಎ20' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ADVERTISEMENT

ರಶ್ಮಿಕಾ ಅವರ ಜಿಮ್‌ ಕಸರತ್ತು ನೋಡಿದರೆ ಈ ಎರಡು ಸಿನಿಮಾಗಳ ಪೈಕಿ ಯಾವುದಾದರೂ ಒಂದು ಸಿನಿಮಾದಲ್ಲಿ ಆ್ಯಕ್ಷನ್‌ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಈ ವರ್ಕೌಟ್‌ ವಿಡಿಯೊಗಳು ಫಿಟ್‌ನೆಸ್‌ ಚಾಲೆಂಜ್‌ ವಿಡಿಯೊಗಳು ಎನ್ನುವವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.