ADVERTISEMENT

ರಣಬಾಲಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರನಾಗಿ ವಿಜಯ್‌ ದೇವರಕೊಂಡ– ರಶ್ಮಿಕಾ ‘ಜಯಮ್ಮ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 0:31 IST
Last Updated 2 ಮಾರ್ಚ್ 2026, 0:31 IST
<div class="paragraphs"><p>ವಿಜಯ್‌ ದೇವರಕೊಂಡ, ರಶ್ಮಿಕಾ</p></div>

ವಿಜಯ್‌ ದೇವರಕೊಂಡ, ರಶ್ಮಿಕಾ

   

‌ಈ ಹಿಂದೆ ಕೆಲ ಚಿತ್ರಗಳಲ್ಲಿ ಜೋಡಿಯಾಗಿದ್ದ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಇತ್ತೀಚೆಗಷ್ಟೇ ರಿಯಲ್‌ ಬದುಕಿನಲ್ಲಿಯೂ ಜೋಡಿಯಾಗಿದ್ದಾರೆ. ಆ ಸುದ್ದಿ ಚಾಲ್ತಿಯಲ್ಲಿರುವಾಗಲೇ ಅವರು ರೀಲ್‌ನಲ್ಲಿಯೂ ಮತ್ತೆ ಜೋಡಿಯಾಗಿ ಸದ್ದು ಮಾಡುತ್ತಿದ್ದಾರೆ. ಇಬ್ಬರೂ ತೆರೆ ಮೇಲೆ ಸತಿ-ಪತಿಯಾಗಿ ಕಾಣಿಸಿಕೊಂಡಿರುವ ‘ರಣಬಾಲಿ’ ಚಿತ್ರದ ಮೊದಲ ಹಾಡು ಹಾಗೂ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‌

ರಾಹುಲ್ ಸಾಂಕೃತ್ಯಾಯನ್‌ ನಿರ್ದೇಶನದ ಚಿತ್ರದ ‘ಏನಯ್ಯ ಸ್ವಾಮಿ’ ಗೀತೆಯಲ್ಲಿ ವಿಜಯ್, ರಶ್ಮಿಕಾ ಗಂಡ ಹೆಂಡತಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ರಣಬಾಲಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಜಯಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

ADVERTISEMENT

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಿಸಿ, ಟಿ-ಸಿರೀಸ್ ಪ್ರಸ್ತುತಪಡಿಸುತ್ತಿದೆ. 19ನೇ ಶತಮಾನದ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ.

19ನೇ ಶತಮಾನದ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾದ ಕಥೆ ಹೊಂದಿರುವ ಚಿತ್ರವು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.