

ಉದಯಪುರದ ಹೊರವಲಯದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತೇಷ್ಟರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ವಿವಾಹ ನೆರವೇರಿತು.
ಮದುವೆ ಉಡುಗೆಯಾಗಿ ರಶ್ಮಿಕಾ ಮಂದಣ್ಣ ಸಾಂಪ್ರದಾಯಿಕ ಚಿನ್ನಾಭರಣಗಳೊಂದಿಗೆ ಕೆಂಪು ಸೀರೆಯನ್ನು ಧರಿಸಿದ್ದರು. ವಿಜಯ್ ದೇವರಕೊಂಡ ಬಿಳಿ ಬಣ್ಣದ ಧೋತಿ ಮತ್ತು ಕೆಂಪು ಶಾಲು ಧರಿಸಿದ್ದರು.
ವಿವಾಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ.
ವಿಜಯ್ ಮತ್ತು ರಶ್ಮಿಕಾ ಎರಡೂ ಕಡೆಯ ಕಟುಂಬಗಳ ಸಂಪ್ರದಾಯಗಳನ್ನು ಅನುಸರಿಸಿ ವಿವಾಹ ನಡೆಯಿತು.
ವಿವಾಹ ಸಮಾರಂಭವು ಮೂರು ದಿನ ನಡೆಯಲಿದೆ. ವಿವಾಹ ನಡೆದ ಸ್ಥಳ ಮತ್ತು ಸುತ್ತಮುತ್ತ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು
ದೇವರಕೊಂಡ ಮತ್ತು ರಶ್ಮಿಕಾ ಜೋಡಿಯು ತೆಲುಗು ಚಿತ್ರ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.