ADVERTISEMENT

ರವಿತೇಜ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆ

ಐಎಎನ್ಎಸ್
Published 29 ಮಾರ್ಚ್ 2023, 10:00 IST
Last Updated 29 ಮಾರ್ಚ್ 2023, 10:00 IST
ಚಿತ್ರಕೃಪೆ:  ಇನ್‌ಸ್ಟಾಗ್ರಾಮ್‌
ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌   

ಮುಂಬೈ: ತೆಲುಗು ನಟ ರವಿತೇಜ ಅವರ ಅಭಿನಯದ ಮುಂಬರುವ ಚಿತ್ರ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ.

ಈ ಕುರಿತು ಟ್ವೀಟ್‌ ಮಾಡಿರುವ ನಟ ಅನುಪಮ್ ಖೇರ್, 'ಟೈಗರ್ ನಾಗೇಶ್ವರ ರಾವ್' ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ.

‘ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದು, ನನ್ನ ಆತ್ಮೀಯ ರವಿತೇಜ ನಟಿಸಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಲು ಸಿದ್ಧವಾಗಿದೆ ಎಂದು ಅವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

'ಟೈಗರ್ ನಾಗೇಶ್ವರ ರಾವ್' ಚಿತ್ರ ರವಿತೇಜ ಅವರ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ವಂಶಿ ನಿರ್ದೇಶಿಸಿದ್ದಾರೆ.

'ಟೈಗರ್ ನಾಗೇಶ್ವರ ರಾವ್' ಚಿತ್ರವು 70ರ ದಶಕದ ಕುಖ್ಯಾತ ಕಳ್ಳನ ಜೀವನಚರಿತ್ರೆ ಕುರಿತಾಗಿದೆ. ರವಿತೇಜ ಅವರ ಗೆಟಪ್ ಈ ಹಿಂದೆಂದೂ ನೋಡಿರದ ಹಾಗೆ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರವಿತೇಜಗೆ ನಾಯಕಿಯರಾಗಿ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ತೆರೆ ಹಂಚಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.