ADVERTISEMENT

ಮತ್ತೆ ಚಿತ್ರಮಂದಿರಕ್ಕೆ ಕೆಜಿಎಫ್-1: ರವೀನಾ ಹುಟ್ಟುಹಬ್ಬಕ್ಕೆ ಶ್ರೀನಿಧಿ ಶುಭಾಶಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 7:01 IST
Last Updated 26 ಅಕ್ಟೋಬರ್ 2020, 7:01 IST
ರವೀನಾ ಟಂಡನ್ ಹುಟ್ಟುಹಬ್ಬಕ್ಕೆ ಕೆಜಿಎಫ್‌ ಚಾಪ್ಟರ್‌ -2 ತಂಡ ಬಿಡುಗಡೆ ಮಾಡಿರುವ ರಮಿಕಾ ಸೇನ್‌ ಪಾತ್ರದ ಪೋಸ್ಟರ್‌
ರವೀನಾ ಟಂಡನ್ ಹುಟ್ಟುಹಬ್ಬಕ್ಕೆ ಕೆಜಿಎಫ್‌ ಚಾಪ್ಟರ್‌ -2 ತಂಡ ಬಿಡುಗಡೆ ಮಾಡಿರುವ ರಮಿಕಾ ಸೇನ್‌ ಪಾತ್ರದ ಪೋಸ್ಟರ್‌   

‘ಕೆಜಿಎಫ್‌ ಚಾಪ್ಟರ್‌ -2’ ಬಿಡುಗಡೆಯ ಸುದ್ದಿ ಜೋರಾಗಿರುವ ನಡುವೆಯೇ ಚಿತ್ರದ ಮೊದಲ ಭಾಗವನ್ನು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಅ. 23ರಿಂದಲೇ ಕೆಲವೆಡೆ ಮರುಬಿಡುಗಡೆ ಮಾಡಲಾಗಿದೆ. ಅ. 29ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಚಿತ್ರ ತಂಡದ ಹಲವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಾಸ್ಕ್‌, ಸಾಮಾಜಿಕ ಅಂತರದ ಜತೆಗೆ ಜವಾಬ್ದಾರಿಯುತವಾಗಿ ಸಿನಿಮಾವನ್ನು ಆನಂದಿಸಿರಿ. ಕೆಜಿಎಪ್‌ -1 ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಅ. 23ರಿಂದ 29ರವರೆಗೆಮರುಬಿಡುಗಡೆ ಆಗುತ್ತಿದೆ’ ಎಂದುಎಂದು ಫರ್ಹಾನ್‌ ಅಖ್ತರ್‌ ಅವರು ಬರೆದುಕೊಂಡಿದ್ದಾರೆ.

ಈ ನಡುವೆ ಕೆಜಿಎಫ್‌ ಚಾಪ್ಟರ್‌ -2ನಲ್ಲಿ ರಮಿಕಾ ಸೇನ್‌ ಪಾತ್ರ ನಿರ್ವಹಿಸಿರುವ ಬಾಲಿವುಡ್‌ ನಟಿ ರವೀನಾ ಟಂಡನ್‌ ಅವರ ಹುಟ್ಟುಹಬ್ಬ ಇಂದು (ಅ. 26). ಹುಟ್ಟುಹಬ್ಬಕ್ಕೆ ಕೆಜಿಎಫ್‌- 2ನ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ.

ADVERTISEMENT

ಚಿತ್ರ ತಂಡವೂ ಸಹ ರಮಿಕಾ ಪಾತ್ರದ ಫೋಟೋ ಒಳಗೊಂಡ ಪೋಸ್ಟರ್‌ ಬಿಡುಗಡೆ ಮಾಡಿ ರವೀನಾ ಅವರಿಗೆ ಶುಭ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.