ಚಿತ್ರ ಕೃಪೆ: sonytvofficial
ಕಾಂತಾರ ಅಧ್ಯಾಯ–1 ಚಿತ್ರ ಯಶಸ್ಸಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ' ಹಿಂದಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆ ವೇಳೆ ರಿಷಬ್ ಅವರು ರಜನಿಕಾಂತ್ ಅವರ ಐಕಾನಿಕ್ ನಡಿಗೆಯನ್ನು ಅನುಕರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ನಾವು ರಜನಿಕಾಂತ್ ಅವರ ಅಭಿಮಾನಿ ಅವರ ಸಿನಿಮಾಗಳನ್ನು ನೋಡಿ ಬೆಳೆದವರು ಎಂದಿದ್ದಾರೆ.
ಇದೇ ವೇಳೆ ಪ್ರೇಕ್ಷಕರೊಬ್ಬರು ರಿಷಬ್ ಅವರಿಗೆ ಕೇಳಿದಂತೆ ರಜನಿಕಾಂತ್ ನಡಿಗೆ ಹಾಗೂ ನಟ ಮೋಹನ್ಲಾಲ್ ಅವರ ‘ನರಸಿಂಹಂ’ ಸಿನಿಮಾದ ಡೈಲಾಗ್ ಅನುಕರಣೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.