ADVERTISEMENT

ಒಂದೇ ಫ್ರೇಮ್‌ನಲ್ಲಿ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್: ಡಿ ಡೇ ದೃಶ್ಯ ವೈರಲ್  

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 10:22 IST
Last Updated 30 ಏಪ್ರಿಲ್ 2020, 10:22 IST
ಡಿ ಡೇ ಚಿತ್ರದ  ದೃಶ್ಯ
ಡಿ ಡೇ ಚಿತ್ರದ ದೃಶ್ಯ   

ಮುಂಬೈ: ನಟ ಇರ್ಫಾನ್ ಖಾನ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ನಿಧನರಾಗಿದ್ದಾರೆ.ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ನೆಟಿಜನ್‌ಗಳು ರಿಷಿ ಕಪೂರ್‌ಅವರ ಸಿನಿಮಾದ ಕೆಲವು ದೃಶ್ಯಗಳನ್ನು ಪೋಸ್ಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಈ ಪೈಕಿ 2013ರಲ್ಲಿ ಬಿಡುಗಡೆಯಾದ ಡಿ-ಡೇ ಚಿತ್ರ ದೃಶ್ಯವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.ವಿಶೇಷವೆಂದರೆ ಈ ಚಿತ್ರದಲ್ಲಿ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಜತೆಯಾಗಿ ನಟಿಸಿದ್ದಾರೆ. ರಿಷಿ ಕಪೂರ್ ಮಸೀದಿಗೆ ಬರುವಾಗ ಇರ್ಫಾನ್ ಖಾನ್ ಕುತೂಹಲದಿಂದ ನೋಡಿ ಇದು ಯಾರು ಎಂದು ಕೇಳುತ್ತಿರುವ ದೃಶ್ಯ ಅದು.

ಅವರಿಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ತೋರಿಸಿದ ಇನ್ನೊಂದು ದೃಶ್ಯ ಕಾರಿನಲ್ಲಿ ಜತೆಯಾಗಿ ಪಯಣಿಸುತ್ತಿರುವುದು. ಈ ವಿಡಿಯೊವನ್ನು ಪೋಸ್ಟ್ ಮಾಡಿನಟರಿಬ್ಬರೂ ಜತೆಯಾಗಿ ಪಯಣ ಮುಗಿಸಿದರು ಎಂದು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ADVERTISEMENT

ನಿಖಿಲ್ ಅಡ್ವಾಣಿ ನಿರ್ದೇಶನ ಡಿ-ಡೇ ಸಿನಿಮಾದಲ್ಲಿ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಕಥಾಪಾತ್ರದಲ್ಲಿ ರಿಷಿ ಕಪೂರ್ ಕಾಣಿಸಿಕೊಂಡಿದ್ದು, ಇರ್ಫಾನ್ ಖಾನ್ ಬೇಹುಗಾರಿಕೆ ಮಾಡುವ ಅಧಿಕಾರಿ ವಾಲಿ ಖಾನ್ ಪಾತ್ರ ನಿರ್ವಹಿಸಿದ್ದರು.
ಇರ್ಫಾನ್ ಮತ್ತು ರಿಷಿ ಕಪೂರ್ ವೃತ್ತಿ ಜೀವನದಲ್ಲಿನ ಉತ್ತಮ ಚಿತ್ರಗಳ ಪೈಕಿ ಡಿ-ಡೇ ಚಿತ್ರವೂ ಇದೆ. ಈ ಚಿತ್ರದಲ್ಲಿ ಇವರಿಬ್ಬರ ನಟನೆಗೆ ಭಾರೀ ಪ್ರಶಂಸೆವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.