ADVERTISEMENT

‘ಕಾಂತಾರ’ ನಟಿ ರುಕ್ಮಿಣಿ ವಸಂತ್‌ಗೆ ಹುಟ್ಟು ಹಬ್ಬದ ಸಂಭ್ರಮ: ಶುಭಕೋರಿದ ಹೊಂಬಾಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 6:07 IST
Last Updated 10 ಡಿಸೆಂಬರ್ 2025, 6:07 IST
   

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ತಿಳಿಸಿದೆ.

ನಟಿ  ರುಕ್ಮಿಣಿ ವಸಂತ್ ಅವರು ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’,  ಗಣೇಶ್ ಜತೆ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಶ್ರೀಮುರುಳಿ ಅವರ ಜತೆ  ‘ಬಘೀರ’, ಶಿವರಾಜ್ ಕುಮಾರ್ ಜತೆ ‘ಬೈರತಿ ರಣಗಲ್‘ ಈ ಎರಡು ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿ  ಪ್ರೇಕ್ಷಕರ ಗಮನ ಸೆಳೆದಿದ್ದರು. 

ಕನ್ನಡ ಹೊರತುಪಡಿಸಿ, ನಟ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್ ಅವರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಅದಲ್ಲದೇ ಇತ್ತಿಚೇಗೆ ಬಿಡುಗಡೆಯಾದ  ‘ಕಾಂತಾರ ಅಧ್ಯಾಯ–1ರಲ್ಲಿ  ರಿಷಬ್ ಶೆಟ್ಟಿ ಜತೆಗೆ ನಟಿ ರುಕ್ಮಿಣಿ ವಸಂತ್‌ ‘ಕನಕವತಿ’ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.