ADVERTISEMENT

‘ರುಸ್ತುಂ’ನ ಮೀಸೆ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:30 IST
Last Updated 29 ಅಕ್ಟೋಬರ್ 2018, 19:30 IST
ರುಸ್ತುಂ ಚಿತ್ರದ ಪೋಸ್ಟರ್
ರುಸ್ತುಂ ಚಿತ್ರದ ಪೋಸ್ಟರ್   

‘ದಿ ವಿಲನ್’ ಸಿನಿಮಾದ ಮೂಲಕ ಜೋರಾಗಿಯೇ ಸದ್ದು ಮಾಡುತ್ತಿರುವ ನಟ ಶಿವರಾಜ್‌ಕುಮಾರ್ ಅವರು‘ರುಸ್ತುಂ’ ಚಿತ್ರದಲ್ಲಿ ಖಾಕಿ ತೊಟ್ಟು ಕೈಯಲ್ಲಿ ಗನ್ ಹಿಡಿದು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಖಾಕಿಯ ಮೂಲಕವೇಸಮಾಜಘಾತುಕರನ್ನು ಬಗ್ಗು ಬಡಿಯಲು ಟೊಂಕ ಕಟ್ಟಿ ನಿಂತಿರುವ ಈ ಸಿನಿಮಾದಲ್ಲಿ ಶಿವಣ್ಣ ಅವರ ಲುಕ್ ವಿಭಿನ್ನವಾಗಿದೆ. ಕೈಯಲ್ಲಿ ಬಂದೂಕು ಹಿಡಿದು, ಮಫ್ತಿಯಲ್ಲಿ ರೌಡಿಗಳೊಂದಿಗೆ ಸೆಣಸಾಡುತ್ತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದಕ್ಕೆ ಕಾರಣ ಶಿವಣ್ಣ ಅವರ ಮುಖದಲ್ಲಿ ಕಾಣಿಸುವ ಮೀಸೆ.

ಬಹುತೇಕ ಸಿನಿಮಾಗಳಲ್ಲಿ ಮೀಸೆ ಇಲ್ಲದ ಶಿವರಾಜ್‌ಕುಮಾರ್ ಅವರೇ ಕಾಣುತ್ತಾರೆ.ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಎನ್ನುವ ಮಾತಿನಂತೆ, ‘ರುಸ್ತುಂ’ನಲ್ಲಿ ಅವರು ಮೀಸೆ ಬಿಟ್ಟಿರುವುದು ಚಿತ್ರಕ್ಕೆ ವಿಭಿನ್ನ ಕಳೆ ತಂದುಕೊಟ್ಟಿದೆ. ಮೀಸೆವುಳ್ಳ ಶಿವಣ್ಣ ಅವರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳೂ ಕಾತುರದಿಂದ ಕಾಯುತ್ತಿದ್ದಾರೆ.

ADVERTISEMENT

‘ರುಸ್ತುಂ’ನ ಚಿತ್ರೀಕರಣವುಬೆಂಗಳೂರು, ಹೈದರಾಬಾದ್, ಮೈಸೂರು ಸೇರಿದಂತೆ ಹಲವೆಡೆ ನಡೆದಿದೆ. ಸಾಹಸಮಯ ಸನ್ನಿವೇಶವನ್ನು ಈಚೆಗೆ ನಿರ್ದೇಶಕ ರವಿವರ್ಮ ಚಿತ್ರಿಸಿದ್ದಾರೆ. ಜಯಣ್ಣ ಬೋಗೆಂದ್ರ ಅವರ ಬಂಡವಾಳದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಪೋಸ್ಟರ್ ಸಹ ಈಚೆಗೆ ರಿಲೀಸ್ ಆಗಿತ್ತು.

ಈ ಚಿತ್ರಕ್ಕಾಗಿ ಬಹು ತಾರೆಗಳ ಬಳಗವೇ ಬಣ್ಣ ಹಚ್ಚಿದೆ. ವಿವೇಕ್ ಒಬೆರಾಯ್, ರಾಜು ಸುಂದರಮ್, ನಟಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ನಟಿ ಮಯೂರಿ ಸಹ ಇದ್ದಾರೆ. ತೆಲುಗಿನ ಸಾಕ್ಷಿ ಚೌಧರಿ ಸೊಂಟ ಬಳುಕಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.