ADVERTISEMENT

ಮಹೇಶ್‌ ಬಾಬು ನಿರ್ಮಾಣದ ‘ಮೇಜರ್‌’ ಸಿನಿಮಾದಲ್ಲಿ ದಬಾಂಗ್ ಚೆಲುವೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 7:03 IST
Last Updated 24 ಸೆಪ್ಟೆಂಬರ್ 2020, 7:03 IST
ಸಾಯಿ ಮಂಜ್ರೇಕರ್‌
ಸಾಯಿ ಮಂಜ್ರೇಕರ್‌   

ಬಾಲಿವುಡ್ ಸಿನಿಮಾ ನಿರ್ಮಾಪಕ ಹಾಗೂ ನಟ ಮಹೇಶ್ ಮಂಜ್ರೇಕರ್‌ ಅವರ ಪುತ್ರಿ ಸಾಯಿ ಮಂಜ್ರೇಕರ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ ಸಿನಿಮಾದ ಮೂಲಕ ನಟನೆ ಆರಂಭಿಸಿದವರು. ಈ ನಟಿ ಈಗ ಮಹೇಶ್‌ ಬಾಬು ನಿರ್ಮಾಣದ ‘ಮೇಜರ್’ ಸಿನಿಮಾದ ಮೂಲಕ ಟಾಲಿವುಡ್‌ಗೆ ಕಾಲಿಡಲಿದ್ದಾರೆ.

ತೆಲುಗು ಹಾಗೂ ಹಿಂದಿ 2 ಭಾಷೆಗಳಲ್ಲಿ ತಯಾರಾಗುತ್ತಿರುವ ‘ಮೇಜರ್’ ಸಿನಿಮಾಕ್ಕೆ ಈ ಬೆಡಗಿ ನಾಯಕಿಯಾಗಲಿದ್ದಾರೆ.

ಸಾಯಿ ಮುಂದಿನ ತಿಂಗಳಿನಿಂದ ಹೈದರಾಬಾದ್‌ನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಅಡವಿ ಶೇಷ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾವು 2008ರ ನವೆಂಬರ್‌ನಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎನ್‌ಎಸ್‌ಜಿ ಕಮಾಂಡೋ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದಿಂದ ಸ್ಫೂರ್ತಿ ಪಡೆದ ಕತೆಯಾಗಿದೆ.

ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸಿನಿಮಾದಲ್ಲಿ ಶೋಭಿತಾ ಧುಲಿಪಾಲ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗಾಗಲೇ ಈ ಸಿನಿಮಾದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ.

ಮಹೇಶ್‌ ಬಾಬು ಅವರ ಜಿಎಂಬಿ ಎಂಟರ್‌ಟೈನ್‌ನೊಂದಿಗೆ ಎ+ಎಸ್ ಮೂವೀಸ್‌, ಸೋನಿ ಪಿಕ್ಚರ್‌ ಫಿಲ್ಸಂ ಕೂಡ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದೆ. ಸಿನಿಮಾವು 2021ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.